ಮುಂಬಯಿ: ಗ್ರಾಹಕರಿಗೆ ಆಹಾರ/ಊಟದ ಡಬ್ಬಿಗಳನ್ನು ತಲುಪಿಸುವ ಮುನ್ನ ಅವುಗಳ ಮೇಲೆ ಸ್ವಚ್ಛತೆಯ ಸಂದೇಶಗಳ ಸ್ಟಿಕರ್ಗಳನ್ನು ಲಗತ್ತಿಸುವಂತೆ ಮುಂಬಯಿಯ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಗಳಾದ ‘ಡಬ್ಬಾವಾಲಾ’ಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.
ಟಿಫಿನ್ ಬಾಕ್ಸ್ಗಳ ಮೇಲ್ಭಾಗದಲ್ಲಿ ‘ದಯವಿಟ್ಟು ಆಹಾರ ಸೇವಿಸುವ ಮುನ್ನ ನಿಮ್ಮ ಕೈಗಳನ್ನು ತೊಳೆಯಿರಿ (Please wash your hands before eating) ಹಾಗೂ ಅಡಿಭಾಗದಲ್ಲಿ ‘ಉಳಿದಿರುವ ಆಹಾರವನ್ನು ಕಸದ ತೊಟ್ಟಿಗೆ ಎಸೆಯಿರಿ’ (Please dispose of left-overfood into waste bins only) ಎಂಬ ಮಾಹಿತಿಯುಳ್ಳ, ಸ್ವಚ್ಛತೆಯನ್ನು ಕಾಪಾಡಲು ಆವಶ್ಯಕವೆನಿಸಿರುವ ಸಂದೇಶಗಳ ಸ್ಟಿಕರ್ಗಳನ್ನು ಲಗತ್ತಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿರುವುದಾಗಿ ನಗರಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವದಾದ್ಯಂತ ಹೆಸರು ಪಡೆದಿರುವ ಈ ‘ಡಬ್ಬಾವಾಲಾ’ಗಳು ಪ್ರತಿನಿತ್ಯ ಸುಮಾರು 2,00,000 ಟಿಫಿನ್ ಬಾಕ್ಸ್ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ಮರು ಟ್ವೀಟ್ ಮಾಡಲು ಹಾಗೂ ಹಂಚಿಕೊಳ್ಳಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.