ನವದೆಹಲಿ: ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯ ಭಾಗವಾಗಿ ತಂತ್ರಜ್ಞಾನ ದೈತ್ಯ ಗೂಗಲ್ ‘ಆಂಡ್ರಾಯ್ಡ್ ಸ್ಕಿಲ್ಲಿಂಗ್ ಮತ್ತು ಸರ್ಟಿಫಿಕೇಶನ್’ ಯೋಜನೆ ಮೂಲಕ ಭಾರತವನ್ನು ಉತ್ತಮ ಗುಣಮಟ್ಟದ ಮೊಬೈಲ್ ಅಭಿವೃದ್ಧಿಕಾರರ ಜಾಗತಿಕ ಹಬ್ ಆಗಿ ಪರಿವರ್ತಿಸಲು ಬಯಸಿದೆ.
ಆಂಡ್ರಾಯ್ಡ್ ಅಭಿವೃದ್ಧಿಪಡಿಸಲು ಭಾರತದ ಸುಮಾರು 2 ಮಿಲಿಯನ್ ಅಭಿವೃದ್ಧಿಕಾರರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳೊಂದಿಗೆ ಪ್ರಮಾಣೀಕೃತ ತರಬೇತಿ ನೀಡಲು ಗೂಗಲ್ ಗುರಿ ಹೊಂದಿದೆ.
ಸುಮಾರು 4 ಮಿಲಿಯನ್ ಮೊಬೈಲ್ ಅಭಿವೃದ್ಧಿಕಾರರೊಂದಿಗೆ ಭಾರತ 2018ರ ಒಳಗೆ ಜಾಗತಿಕ ಡೆವಲಪರ್ ಆಗಲು ನಿರೀಕ್ಷಿಸುತ್ತಿದೆ. ಆದರೆ ಸದ್ಯ ಶೇ.25ರಷ್ಟು ಅಭಿವೃದ್ಧಿಕಾರರು ಮಾತ್ರ ಮೊಬೈಲ್ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಗೂಗಲ್ ಉಪಾಧ್ಯಕ್ಷ (ಉತ್ಪನ್ನ ನಿರ್ವಹಣೆ) ಸೀಸರ್ ಸೇನ್ಗುಪ್ತಾ ಹೇಳಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಆಂಡ್ರಾಯ್ಡ್ ಕುರಿತು ಪ್ರತ್ಯೇಕವಾಗಿ ತರಬೇತಿ ನೀಡಲು ಗೂಗಲ್ ಬೋಧಕ ನೇತೃತ್ವದ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.
ಗೂಗಲ್ ಎಜ್ಯುರೇಕಾ (Edurekqa, ಕೀನಿಗ್ (Koenig, ಮಣಿಪಾಲ್ ಗ್ಲೋಬಲ್ (Manipal Global), ಸಿಂಪ್ಲಿಲರ್ನ್ (Simplilearn), ಯುಡೆಸಿಟಿ Udacity), ಅಪ್ಗ್ರೇಡ್ (Upgrad) ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇವು ಭಾರತದಲ್ಲಿ ಅಧಿಕೃತ ಆಂಡ್ರಾಯ್ಡ್ ತರಬೇತಿ ನೀಡಲು ಗೂಗಲ್ ಜೊತೆ ಕಾರ್ಯನಿರ್ವಹಿಸಲಿದೆ.
ಜಾಗತಿಕವಾಗಿ ಉದ್ಯೋಗಾವಕಾಶ ದೊರೆಯಲು ‘ಅಸೋಸಿಯೇಟ್ ಆಂಡ್ರಾಯ್ಡ್ ಡೆವೆಲಪರ್ಸರ್ಟಿಫಿಕೇಶನ್’ ಪರೀಕ್ಷೆಯನ್ನೂ ನಡೆಸಲಿದೆ ಎಂದು ಗೂಗಲ್ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.