ಪಾಟ್ನಾ : ಪೋಸ್ಟ್ ಮೂಲಕ ಗಂಗಾಜಲವನ್ನು ದೇಶದ ಎಲ್ಲಾ ಭಾಗದ ಜನತೆಗೂ ತಲುಪಿಸುವ ಮಹತ್ವದ ಯೋಜನೆ ‘ಗಂಗಾಜಲ’ ಯೋಜನೆಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಪಾಟ್ನಾದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು.
ಹಿಂದೂಗಳ ಪವಿತ್ರ ಜಲ ಗಂಗಾಜಲವನ್ನು ಕಡಿಮೆ ಬೆಲೆಗೆ ದೊರೆಯುವಂತೆ ಮಾಡಲಾಗಿದೆ. ಪವಿತ್ರ ಸ್ಥಳಗಳಾದ ಗಂಗೋತ್ರಿ ಮತ್ತು ಋಷಿಕೇಶದಲ್ಲಿ ದೊರೆಯುವ ಗಂಗಾಜಲವನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಪೋಸ್ಟ್ ಮಾಡಲಾಗುವುದು. 2016 ರ ಮೇ 30 ರಂದು ಈ ಕುರಿತು ಚರ್ಚಿಸಲಾಗಿದ್ದು ಕಡಿಮೆ ಅವಧಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದ್ದೇವೆ ಎಂದು ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದರು.
ಜನರ ವಿಶ್ವಾಸಾರ್ಹತೆಯನ್ನು ಹೊಂದಿರುವ ಅಂಚೆ ಇಲಾಖೆ ಈ ಯೋಜನೆ ಜೊತೆ ಸೇರಿಕೊಂಡಿದ್ದು, ದೇಶದ ಎಲ್ಲಾ ಜನತೆಯ ಮನೆಗೇ ಗಂಗಾಜಲ ತಲುಪುವುದು ಎಂದು ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದರು.
ಈಗಾಗಲೇ ಇ-ಕಾಮರ್ಸ್ ಮಾರುಕಟ್ಟೆಯ ಮೂಲಕ ಕೆಲವು ಖಾಸಗಿ ಕಂಪನಿಗಳು ಗಂಗಾಜಲವನ್ನು ಗೋಮುಖದಲ್ಲಿ ಸಂಗ್ರಹಿಸಿ ರೂ. 299 ಪ್ರತಿ ಲೀಟರ್ಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.