ದರ್ಬನ್: ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಲ್ಲಿ ರೈಲು ಪ್ರಯಾಣ ಮಾಡುವ ಮೂಲಕ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದರು.
ಡರ್ಬನ್ನ ಚಾರಿತ್ರಿಕ ಪೆನೆಟ್ರಿಚ್ ರೈಲು ನಿಲ್ದಾಣದಿಂದ ಪೀಟರ್ ಮಾರಿಟ್ಜ್ಬರ್ಗ್ಗೆ ಪ್ರಯಾಣ ಮಾಡಿದ ಮೋದಿ, ಮಹಾತ್ಮ ಗಾಂಧೀಜಿಯವರು ಪ್ರಯಾಣಿಸಿದಂತೆ ರೈಲಿನಲ್ಲಿ ನಾನೂ ಕೂಡಾ ಪ್ರಯಾಣಿಸಿದ್ದು, ಈ ಅವಕಾಶ ದೊರೆತದ್ದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.
‘ಬರ್ಥ್ ಪ್ಲೇಸ್ ಆಫ್ ಸತ್ಯಾಗ್ರಹ’ ಪ್ರದರ್ಶನವನ್ನು ಶನಿವಾರ ಪೀಟರ್ ಮಾರಿಟ್ಜ್ಬರ್ಗ್ನಲ್ಲಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಮಹಾತ್ಮಾಗಾಂಧಿಯವರ ಇತಿಹಾಸವನ್ನು ಸ್ಮರಿಸಿದರು. ಈ ನೆಲ ನೆಲ್ಸನ್ ಮಂಡೇಲಾ ಅವರದ್ದು ಮತ್ತು ಗಾಂಧೀಜಿಯವರ ಕರ್ಮಭೂಮಿ. ಗಾಂಧೀಜಿ ಮತ್ತು ನೆಲ್ಸನ್ ಮಂಡೇಲಾ ಅವರ ನೆನಪುಗಳು ಎಂದಿಗೂ ಪ್ರಸ್ತುತ ಮತ್ತು ಎಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ಮೋಹನದಾಸ ಎನ್ನುವ ಹೆಸರಿನಿಂದ ಮಹಾತ್ಮಾ ಆದದ್ದು ಇಲ್ಲಿಂದಲೇ. ಭಾರತದ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಎಲ್ಲ ಮೂರು ಸ್ಥಳಗಳಿಗೆ ಭೇಟಿ ನೀಡಿದ್ದು ನನ್ನ ಪಾಲಿಗೆ ದಕ್ಷಿಣ ಆಫ್ರಿಕ ಪ್ರವಾಸ ತೀರ್ಥಯಾತ್ರೆ ಆದಂತೆ ಆಯಿತು ಎಂದು ಹೇಳಿದರು.
ಗಾಂಧೀಜಿಯವರು ವಾಸ್ತವ್ಯವಿದ್ದ ಸ್ಥಳಗಳಿಗೂ ಈ ಸಂದರ್ಭ ಭೇಟಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.