ಚೆನ್ನೈ: ಚೆನ್ನೈಗೆ ಆಗಮಿಸಿರುವ ಚೀನಾ ನಿಯೋಗವು ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ಕುರಿತು ಪ್ರಭಾವಿತರಾಗಿದ್ದು, ಅಮ್ಮಾ ಕ್ಯಾಂಟೀನ್ನನ್ನು ಚೀನಾದ ಚಾಂಗ್ಕಿಂಗ್ ನಗರದಲ್ಲಿ ತೆರೆಯಲು ಯೋಜಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಜನಪ್ರಿಯ ಯೋಜನೆಗಳಲ್ಲಿ ‘ಅಮ್ಮಾ ಕ್ಯಾಂಟೀನ್’ ಕೂಡಾ ಒಂದು. 2015ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಹಲವು ಜನಪ್ರಿಯ ಯೋಜನೆಗಳನ್ನು ಚೀನಾದಲ್ಲೂ ಅನುಷ್ಠಾನಗೊಳಿಸಲು ಒಪ್ಪಂದ ಮಾಡಿಕೊಂಡಿತ್ತು.
ನಗರ ಮೇಯರ್ ಸೈದಾಯಿ ದೊರೆಸ್ವಾಮಿಯವರು ಚೀನಾ ನಿಯೋಗಕ್ಕೆ ತಮಿಳುನಾಡಿನ ಹಲವಾರು ಜನಪ್ರಿಯ ಕಲ್ಯಾಣಕರ ಯೋಜನೆಗಳನ್ನು ಪರಿಚಯಿಸಿದರು. ಚೀನಾ ನಿಯೋಗವು ಅಮ್ಮಾ ಕ್ಯಾಂಟೀನ್ನಿಂದ ಪ್ರಭಾವಿತಗೊಂಡು ಇದನ್ನು ಚೀನಾದಲ್ಲಿ ತೆರೆಯಲು ಮುಂದಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೆನೈ ಕಾರ್ಪೊರೇಷನ್ ಮತ್ತು ಚಾಂಗಿಂಗ್ ಪುರಸಭೆಯ ನಡುವೆ ಘನ ತ್ಯಾಜ್ಯ ನಿರ್ವಹಣೆ ಮತ್ತು ಸುಧಾರಣೆ ಅಭಿವೃದ್ಧಿ ಸಂಪನ್ಮೂಲಗಳು ವಿನಿಮಯವನ್ನು ಮಾಡಿಕೊಳ್ಳಲಾಗುವುದು. ಇದು ಶಿಕ್ಷಣ, ನಗರ ಯೋಜನೆ ಮತ್ತು ಪರಿಸರಕ್ಕೆ ಸಂಬಂಧಿತ ಯೋಜನೆಗಳನ್ನೂ ಒಳಗೊಂಡಿದೆ ಎನ್ನಲಾಗಿದೆ.
2013 ರಲ್ಲಿ ಚೆನ್ನೈನಲ್ಲಿ ಪ್ರಾರಂಭವಾದ ಅಮ್ಮಾ ಕ್ಯಾಂಟಿನ್ ತಮಿಳುನಾಡಿನಾದ್ಯಂತ ಸುಮಾರು 500 ಕ್ಯಾಂಟೀನ್ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಕೇವಲ 1 ರೂ. ಗೆ ಪೊಂಗಲ್, ಇಡ್ಲಿ ನೀಡಲಾಗುತ್ತದೆ. ಅನ್ನ, ಸಾರು, ಚಪಾತಿಗೆ ಕೇವಲ ರೂ. 3ನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.