ನವದೆಹಲಿ: ವಿಐಪಿ ಗೌರವದತ್ತ ರಾಜಕಾರಣಿಗಳಿಗೆ ಇರುವ ಮೋಹ ಎಂತದ್ದು ಎಂಬುದು ನಮಗೆ ತಿಳಿದಿರುವ ವಿಚಾರ. ಆದರೆ ಇಲ್ಲೊಬ್ಬ ಸಂಸದರು ವಿಐಪಿ ಗೌರವಕ್ಕೆ ’ನೋ’ ಎನ್ನುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತನಗೆ ನೀಡಲಾದ ವಿಶೇಷ ವಿಐಪಿ ಟ್ರೀಟ್ಮೆಂಟ್ನ್ನು ವಿರೋಧಿಸಿ ರಾಜ್ಯಸಭಾ ಸಂಸದ ವಿವೇಕ್ ಟಂಕಾ ಅವರು ಸ್ಪೈಸ್ ಜೆಟ್ ಮ್ಯಾನೇಜ್ಮೆಂಟ್ಗೆ ದೂರು ನೀಡಿದ್ದಾರೆ. ಈ ಮೂಲಕ ಇತರ ರಾಜಕಾರಣಿಗಳಿಗಿಂತ ತಾನು ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಜಬಲ್ಪುರದಿಂದ ದೆಹಲಿಗೆ ಆಗಮಿಸಿದ ವೇಳೆ ಇವರು ಮತ್ತು ಇನ್ನೋರ್ವ ಸಂಸದ ಟ್ರಾನ್ಸಿಟ್ ಬಸ್ ಏರಿದ ಬಳಿಕ ಬಸ್ನ ಬಾಗಿಲನ್ನು ಬಂದ್ ಮಾಡಲಾಗಿದೆ. ಬಳಿಕ ಅದರೊಳಗೆ ಇತರ ಪ್ರಯಾಣಿಕರನ್ನು ಬರಲು ಬಿಡಲಿಲ್ಲ.
ಇದು ಟಂಕಾ ಅವರಿಗೆ ಇರಿಸು ಮುರಿಸು ಉಂಟು ಮಾಡಿದೆ. ಈ ಬಗ್ಗೆ ಬಳಿಕ ಅವರು ದೂರನ್ನೂ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.