ನವದೆಹಲಿ: ಢಾಕಾ ಉಗ್ರರಿಗೆ ನರಹತ್ಯೆ ಮಾಡಲು ಪ್ರೇರಣಾಶಕ್ತಿಯಾಗಿದ್ದ ಇಸ್ಲಾಂ ಧರ್ಮ ಬೋಧಕ ಝಾಕೀರ್ ನಾಯ್ಕ್ನನ್ನು ಒಂದು ಕಾಲದಲ್ಲಿ ’ಶಾಂತಿ ದೂತ’ ಎಂದು ಹೊಗಳಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ.
2012ರಲ್ಲಿ ಝಾಕೀರ್ ಶಾಂತಿ ದೂತ ಎಂದು ಪ್ರತಿಪಾದಿಸಿ ಇವರು ಮಾಡಿದ್ದ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಕಾಂಗ್ರೆಸ್ಗೆ ತೀವ್ರ ಮುಜುಗರವನ್ನುಂಟು ಮಾಡಿದೆ.
ನಾಯ್ಕ್ನೊಂದಿಗೆ ದಿಗ್ವಿಜಯ್ ಸಿಂಗ್ ಈ ವೇಳೆ ವೇದಿಕೆಯನ್ನೂ ಹಂಚಿಕೊಂಡಿದ್ದರು. ಮಾತ್ರವಲ್ಲ ಆತನೊಬ್ಬ ಶಾಂತಿ ದೂತ ಎಂದು ಹೇಳಿದ್ದರು.
ಬಿಜೆಪಿ ದಿಗ್ವಿಜಯ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲ, ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂದು ಆರೋಪ ಮಾಡಿತ್ತು.
ಒಟ್ಟಿನಲ್ಲಿ ಈಗ ಜಗತ್ತಿನ ಮುಂದೆ ಝಾಕೀರ್ ನಾಯ್ಕ್ ನಿಜಬಣ್ಣ ಬಯಲಾಗಿದೆ. ಈಗಲೂ ದಿಗ್ವಿಜಯ್ ಆತನನ್ನು ಸಮರ್ಥಿಸಿಕೊಳ್ಳುವರೇ ಎಂದು ಕಾದು ನೋಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.