ನೋಯ್ಡಾ: ಡೆಲಿವರಿ ಶುಲ್ಕ ರೂ. 40 ರೊಂದಿಗೆ ಜುಲೈ 8 ರಿಂದ ಫ್ರೀಡಮ್ 251 ಸ್ಮಾರ್ಟ್ಫೋನ್ ದೊರೆಯಲಿದೆ ಎಂದು ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಘೋಷಿಸಿದೆ. ಮೊದಲ ಹಂತದಲ್ಲಿ ರೂ. 40 ಡೆಲಿವರಿ ಶುಲ್ಕದೊಂದಿಗೆ ಕೇವಲ 5,000 ಗ್ರಾಹಕರಿಗೆ ಮಾತ್ರ ಸ್ಮಾರ್ಟ್ಫೋನ್ಗಳನ್ನು ವಿತರಿಸಲಾಗುವುದು ಎಂದು ಅದು ಹೇಳಿದೆ.
ಈ ಸ್ಮಾರ್ಟ್ಫೋನ್ನ ಒಟ್ಟು ದರ ರೂ. 251 ಇದ್ದು, ಮೊದಲ ಹಂತದಲ್ಲಿ 5,000 ಗ್ರಾಹಕರಿಗೆ ವಿತರಿಸಲಾಗುವುದು. ಗ್ರಾಹಕರ ಪ್ರತಿಕ್ರಿಯೆ ಪಡೆದ ಬಳಿಕ ಮತ್ತಷ್ಟು ಹ್ಯಾಂಡ್ಸೆಟ್ಗಳನ್ನು ವಿತರಿಸಲಾಗುವುದು. ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ದೇಶದಾದ್ಯಂತ 500 ಪಾನ್-ಇಂಡಿಯಾ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ರಿಂಗಿಂಗ್ ಬೆಲ್ಸ್ ಸಿಇಒ ಮೋಹಿತ್ ಗೋಯಲ್ ಹೇಳಿದ್ದಾರೆ.
ರಿಂಗಿಂಗ್ ಬೆಲ್ಸ್ ಕಂಪೆನಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಡಿಜಿಟಲ್ ಇಂಡಿಯಾ ನಿಧಿ ಮೂಲಕ 50,000 ಕೋಟಿ ಒದಗಿಸಿದಲ್ಲಿ ರೂ.251 ದರದಲ್ಲಿ ಸ್ಮಾರ್ಟ್ಫೋನ್ಗಳನ್ನು ವಿತರಿಸಲಾಗುವುದು ಎಂದು ಗೋಯಲ್ ಹೇಳಿದ್ದಾರೆ.
ರಿಂಗಿಂಗ್ ಬೆಲ್ಸ್ ತನ್ನ ಫ್ರೀಡಮ್ 251 ಸ್ಮಾರ್ಟ್ಫೋನ್ಗಳ ವಿತರಣೆಯನ್ನು ಜೂನ್ 30 ರಿಂದ ಜುಲೈ 6 ಕ್ಕೆ ಮುಂದೂಡಿದ್ದು, ಇದೀಗ ಜುಲೈ 8 ರಿಂದ ವಿತರಣೆ ಮಾಡುವುದಾಗಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.