ನವದೆಹಲಿ: ದಲಿತ ಕುಟುಂಬದಲ್ಲಿ ಜನಿಸಿ ನೇಕಾರ ವೃತ್ತಿ ಮಾಡುತ್ತಲೇ ಸುಶಿಕ್ಷಿತರಾಗಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿ ನೇಮಕವಾಗಿರುವ ಅರ್ಜುನ್ ರಾಮ್ ಮೇಘಾವಾಲ್ ಅವರ ಜೀವನ ಯಾನ ನಿಜಕ್ಕೂ ಪ್ರೇರಣಾದಾಯಕ.
ಬಿಕನೇರ್ನ ಕಿಸ್ಮಿದೆಸರ್ ಗ್ರಾಮದಲ್ಲಿ ಸಾಂಪ್ರದಾಯಿಕ ನೇಕಾರ ವೃತ್ತಿಯ ದಲಿತ ಕುಟುಂಬದಲ್ಲಿ ಜನಿಸಿದ ಮೇಘಾವಾಲ್ 13ನೇ ವಯಸ್ಸಿನಲ್ಲೇ ಮದುವೆಯಾದವರು. ಆದರೂ ತಂದೆಯೊಂದಿಗೆ ಬಟ್ಟೆ ನೇಯುತ್ತಲೇ ಶಿಕ್ಷಣವನ್ನು ಪೂರೈಸಿದವರು. ಬಿ.ಎ, ಎಂ.ಎ, ಎಲ್ಎಲ್ಬಿ ಮಾಡಿರುವ ಇವರು ಐಎಎಸ್ ಬರೆದರು. ಭಾರತೀಯ ಪೋಸ್ಟ್ ಮತ್ತು ಟೆಲಿಗ್ರಾಂ ಇಲಾಖೆಯಲ್ಲಿ ಆಪರೇಟರ್ ಆದರು.
ಟೆಲಿಫೋನ್ ಟ್ರಾಫಿಕ್ ಅಸೋಸಿಯೇಶನ್ನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದೇ ಇವರ ಮೊದಲ ರಾಜಕೀಯವಾಗಿತ್ತು. ರಾಜಸ್ಥಾನ ರಾಜ್ಯ ಆಡಳಿತಾತ್ಮಕ ಸೇವೆ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ ಉತ್ತೀರ್ಣರಾದ ಇವರು, ಚುರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
2009 ರಲ್ಲಿ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದ ಇವರು, ಬಿಕನೇರ್ನಲ್ಲಿ ಗೆದ್ದು ಬಂದರು. 2014 ರಲ್ಲೂ ಅದೇ ಕ್ಷೇತ್ರದಿಂದ ಗೆದ್ದು ಬಂದರು.
ಸಂಸತ್ತಿಗೆ ಸೈಕಲ್ ಮೂಲಕ ಆಗಮಿಸಿ ಸುದ್ದಿ ಮಾಡಿದ ಇವರು, ಪ್ರಮಾಣವಚನ ಸ್ವೀಕಾರದ ವೇಳೆಯೂ ರಾಷ್ಟ್ರಪತಿ ಭವನಕ್ಕೆ ಸೈಕಲ್ ಮೂಲಕ ಆಗಮಿಸಿದರು.
ಪ್ರೇರಣಾದಾಯಕ ಹಿನ್ನಲೆ ಹೊಂದಿರುವ ಕೆಲವೇ ಕೆಲವು ರಾಜಕಾರಣಿಗಳ ಸಾಲಿಗೆ ಮೇಘಾವಾಲ್ ಕೂಡ ಸೇರುತ್ತಾರೆ. ಸಚಿವರಾಗಿ ಅವರಿಂದ ಈ ದೇಶದ ಜನ ಉತ್ತಮ ಕಾರ್ಯದ ನಿರೀಕ್ಷೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.