ನಾಗ್ಪುರ: ನಾಗ್ಪುರ ಮೂಲದ 11 ವರ್ಷದ ಬಾಲಕ ಅಖಿಲೇಶ್ ಚಂದೋರ್ಕರ್ನ ಐಕ್ಯೂ ಮಟ್ಟ 160 ಇದೆ ಎಂದು ಖಚಿತಪಡಿಸಲಾಗಿದೆ. ಇದು ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ಸ್ರಷ್ಟೇ ಆಗಿದೆ ಎಂದು ಹೇಳಲಾಗಿದ್ದು, ಜಗತ್ತಿನಲ್ಲೇ ಶೇ. 2 ರಷ್ಟು ಜನರು ಮಾತ್ರ ಈ ಮಟ್ಟದಲ್ಲಿ ಐಕ್ಯೂ ಹೊಂದಿರುತ್ತಾರೆ.
ಜೈನ್ ಇಂಟರ್ನ್ಯಾಶನಲ್ ಸ್ಕೂಲ್ನ ವಿದ್ಯಾರ್ಥಿ ಅಖಿಲೇಶ್ ಹ್ಯಾರಿ ಪಾಟರ್ ಅಭಿಮಾನಿಯಾಗಿದ್ದು, ಸ್ಕಾಟ್ಲೆಂಡ್ನ ಮೆನ್ಸಾ ಪರೀಕ್ಷೆಯಲ್ಲಿ ಸುಮಾರು 160 ರಷ್ಟು ಮಟ್ಟದ ಐಕ್ಯೂ ಹೊಂದಿದ್ದಾನೆ. ಸುಮಾರು 140 ರಷ್ಟು ಮಟ್ಟದ ಐಕ್ಯೂ ಹೊಂದುವ ನಿರೀಕ್ಷೆ ಇಟ್ಟುಕೊಂಡಿದ್ದ ಅಖಿಲೇಶ್, ಈ ಫಲಿತಾಂಶ ತೀವ್ರ ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾನೆ.
ಖಗೋಳಶಾಸ್ತ್ರಜ್ಞನಾಗುವ ಬಯಕೆ ಹೊಂದಿರುವ ಅಖಿಲೇಶ್ ಈಗಾಗಲೇ ಕಪ್ಪು ಕುಳಿಗಳ (black holes ) ಬಗ್ಗೆ ಅಧ್ಯಯನ ನಡೆಸುತ್ತಿರುವುದಾಗಿ ಹೇಳಿದ್ದಾನೆ.
ಸಾಮಾನ್ಯವಾಗಿ 9 ವರ್ಷ ವಯಸ್ಸಿನ ಮಕ್ಕಳಿಗೆ ಇರುವ ಬುದ್ಧಿಮತ್ತೆಯನ್ನು ಅಖಿಲೇಶ್ ತನ್ನ 4 ವರ್ಷದಲ್ಲೇ ಹೊಂದಿದ್ದನ್ನು. 4 ವರ್ಷ ವಯಸ್ಸಿನಲ್ಲೇ ಅಖಿಲೇಶ್ ಜಿಗ್ಸಾ ಒಗಟುಗಳನ್ನು ಪರಿಹರಿಸುತ್ತಿದ್ದು, ಲೆಗೋ ಬ್ಲಾಕ್ಗಳನ್ನು ಒಟ್ಟುಗೂಡಿಸುತ್ತಿದ್ದ ಎಂದು ಆತನ ಪೋಷಕರು ಹೇಳಿದ್ದಾರೆ.
ಆಸ್ಟ್ರೇಲಿಯಾದ ನ್ಯಾಯವಾದಿ ರೋಲ್ಯಾಂಡ್ ಬೆರಿಲ್ ಹಾಗೂ ವಿಜ್ಞಾನಿ ಮತ್ತು ವಕೀಲ ಲ್ಯಾನ್ಸ್ ವೇರ್ 1946ರಲ್ಲಿ ಆಕ್ಸ್ಫರ್ಡ್ನಲ್ಲಿ ಮೆನ್ಸಾವನ್ನು ಸ್ಥಾಪಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.