ಬೆಂಗಳೂರು: ನಿಖರ ವೀಸಾವಿಲ್ಲದೆ ಬೆಂಗಳೂರಿನಲ್ಲಿ ನೆಲೆಸಿರುವ 1500 ಮಂದಿ ಆಫ್ರಿಕನ್ನರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದು, ಅವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಇವರೆಲ್ಲಾ ವಿದ್ಯಾರ್ಥಿಗಳಾಗಿದ್ದು, ಜುಲೈ ಅಂತ್ಯದೊಳಗೆ ಇವರನ್ನು ಹೊರಗಟ್ಟುವುದಾಗಿ ಪೊಲೀಸರು ಹೇಳಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ಆಫ್ರಿಕನ್ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಬಯಲಾದ ಹಿನ್ನಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ನಿಖರ ವೀಸಾವಿಲ್ಲದೆ, ವೀಸಾ ಅವಧಿ ಮುಗಿದರೂ ಓವರ್ಸ್ಟೇ ಮಾಡುತ್ತಿರುವವರನ್ನು ವಾಪಾಸ್ ಅವರ ಊರಿಗೆ ಅಟ್ಟಲು ಸಿದ್ಧತೆಗಳನ್ನು ನಡೆಸಲಾಗುತ್ತದೆ.
ಬೆಂಗಳೂರಿನಲ್ಲಿ ಒಟ್ಟು 6 ಸಾವಿರ ಆಫ್ರಿಕನ್ ವಿದ್ಯಾರ್ಥಿಗಳಿದ್ದಾರೆ. 1500ಕ್ಕೂ ಅಧಿಕ ಮಂದಿ ನಿಖರ ವೀಸಾವಿಲ್ಲದೆ ಬದುಕುತ್ತಿದ್ದಾರೆ. ಈ ಬಗೆಗಿನ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಬೆಂಗಳೂರು ಪೊಲೀಸರು ಕಳುಹಿಸಿಕೊಡಲಿದ್ದಾರೆ.
ಕಳೆದ ವಾರ 60 ವಿದ್ಯಾರ್ಥಿಗಳನ್ನು ಹೊರಗಟ್ಟಲಾಗಿದೆ. ಈ ತಿಂಗಳೊಳಗೆ 1500 ಮಂದಿಯನ್ನು ಹೊರಗಟ್ಟಲು ನಿರ್ಧರಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.