ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಮಂಗಳವಾರ ವಿಶ್ವದ ಅತೀದೊಡ್ಡ ’ಚರಕ’ವನ್ನು ನವದೆಹಲಿಯ ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ನ ಟರ್ಮಿನಲ್ -3ಯಲ್ಲಿ ಉದ್ಘಾಟನೆಗೊಳಿಸಿದರು.
ಈ ವೇಳೆ ಸ್ವಾವಲಂಬನೆಯ ಪ್ರತೀಕವಾದ ಚರಕ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಕೊಡುಗೆಗಳನ್ನು ಷಾ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರು ಗೌರವ ಅತಿಥಿಯಾಗಿದ್ದರು.
‘ಟರ್ಮಿನಲ್ನಲ್ಲಿ ಅದ್ಭುತ ಕುಸುರಿಯ ಮೂಲಕ ಚರಕವನ್ನು ಸ್ಥಾಪನೆ ಮಾಡಿದ್ದು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸಲಿದೆ’ ಎಂದು ಷಾ ಅಭಿಪ್ರಾಯಪಟ್ಟರು.
ಈ ಬಗ್ಗೆ ಸಂದೇಶ ರವಾನಿಸಿರುವ ಮೋದಿ, ‘ವಿಮಾನನಿಲ್ದಾಣದ ಪ್ರಯಾಣಿಕರಿಗೆ ಭಾರತದ ಪರಂಪರೆ, ಸೌಹಾರ್ದತೆ ಮತ್ತು ಮೌಲ್ಯಗಳನ್ನು ನೆನಪು ಮಾಡಿಕೊಡುವಲ್ಲಿ ಈ ಚರಕ ಬಹುಮುಖ್ಯ ಪಾತ್ರವಹಿಸಲಿದೆ’ ಎಂದರು.
ಈ ಚರಕವನ್ನು ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿ ಸ್ಥಾಪನೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.