ನವದೆಹಲಿ: ಇಂಟರ್ನೆಟ್ ಸೇವೆಗಳ ಮೊಬೈಲ್ ರೀಚಾರ್ಜ್ ವೋಚರ್ಗಳ ವ್ಯಾಲಿಡಿಟಿಯನ್ನು 90 ದಿನಗಳ ಬದಲು 365 ದಿನಗಳಿಗೆ ಹೆಚ್ಚಿಸುವಂತೆ ಟೆಲಿಕಾಂ ನಿಯಂತ್ರಕ ಟ್ರಾಯ್ ಪ್ರಸ್ತಾಪಿಸಿದೆ.
ಇದರ ವಿವಿಧ ಅಂಕಿ ಅಂಶಗಳನ್ನು ಪರೀಕ್ಷಿಸಿದ ಬಳಿಕ ಪ್ರಾಧಿಕಾರ ಪ್ರಸ್ತುತ ಇರುವ ಗರಿಷ್ಠ 90 ದಿನಗಳ ವ್ಯಾಲಿಡಿಟಿ ಬದಲು 365 ದಿಗಳಿಗೆ ಏರಿಕೆ ಮಾಡುವ ಮೂಲಕ ನಿತ್ಯ ಇಂಟರ್ನೆಟ್ ಬಳಕೆದಾರರು, ಹೊಸ ಗ್ರಾಹಕರು ಹಾಗೂ ಇಂಟರ್ನೆಟ್ ದರಗಳ ಮೇಲೆ ಅವಲಂಬಿತ ಗ್ರಾಹಕರಿಗೆ ಅನುಕೂಲಕರ ಯೋಜನೆ ತರುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೇಳಿದೆ.
ಪ್ರಸ್ತುತ ಕಂಪೆನಿಗಳು ನೀಡುತ್ತಿರುವ 90 ದಿನಗಳ ಅವಧಿಯಲ್ಲಿ ರೀಚಾರ್ಜ್ ವೋಚರ್ಗಳ ಡಾಟಾವನ್ನು ಬಳಸದಿದ್ದಲ್ಲಿ ಗ್ರಾಹಕರು ತಮ್ಮ ಡಾಟಾವನ್ನು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ.
ಟೆಲಿಕಾಂ ಪ್ರಾಧಿಕಾರ ಕಡಿಮೆ ದರಗಳ ಡಾಟಾ ಪ್ಯಾಕ್ಗಳಿಗೆ ಹೆಚ್ಚಿನ ವ್ಯಾಲಿಡಿಟಿ ನೀಡುವಂತೆ ಗ್ರಾಹಕರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.