ನವದೆಹಲಿ: ಜುಲೈ 18 ರಿಂದ ಆರಂಭಗೊಳ್ಳುವ ಮಳೆಗಾಲದ ಅಧಿವೇಶನಕ್ಕೆ ಈಗಿನಿಂದಲೇ ಸಿದ್ಧತೆ ಆರಂಭಿಸಿ ಎಂಬುದಾಗಿ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಂಡ ಸಚಿವರುಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
‘ನಿಮ್ಮ ಬಳಿ ತುಂಬಾ ಕಡಿಮೆ ಸಮಯವಿದೆ, ಹೀಗಾಗಿ ಸಂಭ್ರಮಿಸುವುದನ್ನು ಬಿಟ್ಟು ಆದಷ್ಟು ಬೇಗ ಕಾರ್ಯದತ್ತ ಮುಖ ಮಾಡಿ’ ಎಂದು ನೂತನ ಸಚಿವರುಗಳಿಗೆ ಮೋದಿ ಕಿವಿ ಮಾತು ಹೇಳಿದ್ದಾರೆ.
ಅಲ್ಲದೇ ಆಗಸ್ಟ್ 15ರ ಬಳಿಕ ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ಕೊಡುವಂತೆ ಸೂಚಿಸಿದ್ದಾರೆ. ಆ ವೇಳೆಗೆ ಮಳೆಗಾಲದ ಅಧಿವೇಶನವೂ ಮುಕ್ತಾಯಗೊಂಡಿರುತ್ತದೆ.
ಪ್ರಮಾಣವಚನದ ಬಳಿಕ ಸಚಿವರುಗಳಿಗೆ ತಮ್ಮ ಕಛೇರಿಯಲ್ಲಿ ಟೀ ಪಾರ್ಟಿ ಏರ್ಪಡಿಸಿದ್ದ ಮೋದಿ, ‘ಪ್ರಧಾನಿಯಾದ ಮೊದಲ ನಾಲ್ಕು ತಿಂಗಳು ಪ್ರಮಾಣಿಕವಾಗಿ ನನ್ನ ಕೆಲಸವನ್ನು ಕಲಿತೆ, ಸಚಿವರ ಕಾರ್ಯ ಸರ್ಕಾರಕ್ಕೆ ಅತ್ಯಗತ್ಯ. ಹಾಗಾಗೀ ನೀವೆಲ್ಲ ನಿಮ್ಮ ಕಾರ್ಯವನ್ನು ತ್ವರಿತವಾಗಿ ಮಾಡಬೇಕು. ಅಗತ್ಯಬಿದ್ದಾಗ ನನ್ನನ್ನು ಸಂಪರ್ಕಿಸಿ. ನಾಲ್ಕು ದಿನ ಆಫ್ರಿಕಾ ಪ್ರವಾಸಕೈಗೊಂಡಿದ್ದೇನೆ. ಅಲ್ಲಿಯವರೆಗೆ ನೀವು ನಿಮ್ಮ ಸಚಿವಾಲಯದ ಜವಾಬ್ದಾರಿಗಳನ್ನು ಕೈಗೆತ್ತಿಕೊಂಡಿರಿ’ ಎಂದಿದ್ದಾರೆ.
ಮೋದಿ ಸಂಪುಟಕ್ಕೆ ಹೊಸದಾಗಿ 19 ಸಚಿವರುಗಳನ್ನು ಸೇರ್ಪಡೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.