ನವದೆಹಲಿ: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಹಂಗೇರಿಯ ವಿದೇಶ ವ್ಯವಹಾರ ಮತ್ತು ವಾಣಿಜ್ಯ ಸಚಿವ ಪೀಟರ್ ಝಿಜ್ಜಾರ್ತೊ ದ್ವಿಪಕ್ಷೀಯ ಸಂಬಂಧಗಳು ಮತ್ತು ವ್ಯಾಪಾರ ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಭಾರತ ಮತ್ತು ಹಂಗೇರಿ ನಡುವಿನ ಒಟ್ಟು ವಾರ್ಷಿಕ ದ್ವಿಪಕ್ಷೀಯ ವ್ಯಾಪಾರ 600 ಮಿಲಿಯನ್ ಡಾಲರ್ ನಷ್ಟಿದ್ದು, ಭಾರತದ ರಫ್ತು ಪ್ರಮಾಣ 385 ಮಿಲಿಯನ್ ಡಾಲರ್ ಹಾಗೂ ಹಂಗರಿಯ ರಫ್ತು ಪ್ರಮಾಣ 210 ಮಿಲಿಯನ್ ಡಾಲರ್ ಆಗಿದೆ.
ಭಾರತ ಹಂಗೇರಿಯಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಭಾರತದ ಸುಮಾರು 15 ಕಂಪೆನಿಗಳು ಹಂಗೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಜಿಜ್ಜಾರ್ತೊ ಅನಂತರ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲಿದ್ದಾರೆ.
ಎರಡು ರಾಷ್ಟ್ರಗಳು ಬ್ರೆಕ್ಸಿಟ್ ವೋಟ್ ಮತ್ತು ಅದರ ಪರಿಣಾಮಗಳ ಬಗ್ಗೆಯೂ ಮಾತುಕತೆ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.