ನವದೆಹಲಿ: ರೈಲ್ವೇ ಟ್ರ್ಯಾಕ್ ಮೇಲೆ ಕಸಕಡ್ಡಿಗಳನ್ನು ಎಸೆದು ಗಲೀಜು ಮಾಡುವವರ ವಿರುದ್ಧ ರೂ.5000 ದಂಡ ವಿಧಿಸುವಂತೆ ಮತ್ತು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಹಸಿರು ನ್ಯಾಯ ಮಂಡಳಿ ರೈಲ್ವೇಗೆ ತಿಳಿಸಿದೆ.
‘ಕಟ್ಟಡಗಳ ಗಲೀಜುಗಳು, ಕಸಕಡ್ಡಿಗಳು ರೈಲ್ವೇ ಟ್ರ್ಯಾಕ್ ಮೇಲೆ ಶಾಶ್ವತವಾಗಿವೆ. ಗಲೀಜನ್ನು ಟ್ರ್ಯಾಕ್ ಮೇಲೆ ಹಾಕಲು ಅವರಿಗೆ ಅನುಮತಿ ಯಾಕೆ ನೀಡಿದ್ದೀರಿ? ಒಂದೇ ಒಂದು ಕಟ್ಟಡವನ್ನೂ ಟ್ರ್ಯಾಕ್ಗೆ ಗಲೀಜು ಎಸೆಯದಂತೆ ಮಾಡುವಲ್ಲಿ ನೀವು ಏಕೆ ವಿಫಲರಾಗಿದ್ದೀರಿ? ಎಂದು ಹಸಿರು ನ್ಯಾಯ ಮಂಡಳಿ ಪ್ರಶ್ನಿಸಿದೆ.
ಕಸ ಎಸೆಯುವವರ ವಿರುದ್ಧ 5 ಸಾವಿರ ದಂಡ ವಿಧಿಸಿ, ಆಗ ಮತ್ತೊಮ್ಮೆ ಅವರು ತಪ್ಪು ಮಾಡುವುದಿಲ್ಲ ಎಂದು ಮಂಡಳಿಯ ಮುಖ್ಯಸ್ಥ ಸ್ವತಂತರ್ ಕುಮಾರ್ ಹೇಳಿದ್ದಾರೆ.
ಅಲ್ಲದೇ ತಪ್ಪಿತಸ್ಥರ ಹೆಸರುಳ್ಳ ಪಟ್ಟಿಯನ್ನು ತನಗೆ ನೀಡುವಂತೆ ಅದು ಆದೇಶಿಸಿದೆ.
ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ರೈಲ್ವೇ ಟ್ರ್ಯಾಕ್ ಸಮೀಪದ ಕಟ್ಟಡಗಳು ತಮ್ಮ ತಮ್ಮ ಗಲೀಜುಗಳನ್ನು ತಂದು ಟ್ರ್ಯಾಕ್ ಮೇಲೆ ಸುರಿಯುತ್ತವೆ. ಇದರಿಂದ ಟ್ರ್ಯಾಕ್ ಕೊಳಚೆ ಗುಂಡಿಯಾಗಿ ಪರಿವರ್ತನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.