ಮಿಯಾಮಿ: ಐದು ವರ್ಷಗಳ ಹಿಂದೆ ಉಡಾವಣೆಗೊಂಡ ನಾಸಾದ ಮಾನವರಹಿತ ಸ್ಪೇಸ್ಕ್ರಾಫ್ಟ್ ಜ್ಯುನೋ ಗುರು ಗ್ರಹದ ಕಕ್ಷೆಯನ್ನು ಪ್ರವೇಶಿಸಿದೆ. ಗುರು ಗ್ರಹದಲ್ಲಿ ಲಭ್ಯವಿರುವ ನೀರಿನ ಅಂಶ, ಸೌರ ಮಂಡಲ ರಚನೆ, ಗುರುಗ್ರಹದ ರಚನೆ ಸೇರಿದಂತೆ ಭೂಮಿಯ ಮೇಲೆ ಗುರುಗ್ರಹದ ಪ್ರಭಾವ ಕುರಿತು ಅಧ್ಯಯನ ನಡೆಸಲಿದೆ. ಇವೆಲ್ಲವನ್ನೂ ಅರ್ಥಮಾಡಿಕೊಳ್ಳಲು ಈ ಸ್ಪೇಸ್ಕ್ರಾಫ್ಟ್ ಕಳುಹಿಸುವ ಚಿತ್ರ ಮತ್ತು ದತ್ತಾಂಶಗಳು ಸಹಕಾರಿಯಾಗಲಿವೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಫ್ಲೋರಿಡಾದ ಕೇಪ್ ಕೆನವೆರಲ್ನಲ್ಲಿ 5 ವರ್ಷಗಳ ಹಿಂದೆ ಸೌರ ಶಕ್ತಿ ಚಾಲಿತ ಜ್ಯುನೋ ಬಾಹ್ಯಾಕಾಶ ನೌಕೆ 1.7 ಬಿಲಿಯನ್ ಮೈಲು (2.7 ಬಿಲಿಯನ್ ಕಿ.ಮೀ.) ಚಲಿಸಿದೆ.
ಸೌರ ಮಂಡಲದ ಅತೀ ದೊಡ್ಡ ಗ್ರಹವಾಗಿರುವ ಗುರು ಗ್ರಹ ಜಲಜನಕ ಮತ್ತು ಹೀಲಿಯಂನಿಂದ ಕೂಡಿದೆ. ಗುರು ಗ್ರಹದಲ್ಲಿದಲ್ಲಿ ನೀರಿನ ಅಂಶ ಎಷ್ಟಿದೆ ಮತ್ತು ಸೌರಮಂಡಲದಲ್ಲಿ ಅದು ರೂಪುಗೊಂಡ ಬಗ್ಗೆ ತಿಳಿದುಕೊಳ್ಳಲು ವಿಜ್ಞಾನಿಗಳು ಆಸಕ್ತಿ ಹೊಂದಿದ್ದಾರೆ. ಮೊದಲ ಗ್ರಹವಾದ ಗುರು ಗ್ರಹದಿಂದ ಭೂಮಿಯ ವಿಂಗಡಣೆ, ಅದರ ಇತಿಹಾಸ, ಮಾನವ ಜೀವನದ ಉಗಮದ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಜ್ಯುನೋದ ಮುಖ್ಯ ವಿಜ್ಞಾನಿ ಸ್ಕಾಟ್ ಬೋಲ್ಟನ್ ಹೇಳಿದ್ದಾರೆ.
ಜ್ಯುನೋ ಗುರು ಗ್ರಹದ ಕಕ್ಷೆಯನ್ನು ಪ್ರವೇಶಿಸಿದ ಎರಡನೇ ಬಾಹ್ಯಾಕಾಶ ನೌಕೆಯಾಗಿದೆ.
ಈ ಹಿಂದೆ 1989ರಲ್ಲಿ ಗೆಲಿಲಿಯೋ ಹೆಸರಿನ ಬಾಹ್ಯಾಕಾಶ ನೌಕೆಯನ್ನು ಗುರು ಗ್ರಹದ ಕಕ್ಷೆಗೆ ಕಳುಹಿಸಲಾಗಿದ್ದು, ಸುಮಾರು ಒಂದು ದಶಕಗಳ ಕಾಲ ಗುರು ಗ್ರಹ ಹಾಗೂ ಇತರ ಗ್ರಹಗಳು, ಉಪಗ್ರಹಗಳ ವೀಕ್ಷಣೆ ನಡೆಸಿತ್ತು.
ಜ್ಯುನೋ ಸ್ಪೇಸ್ಕ್ರಾಫ್ಟ್ ಗುರುಗ್ರಹವನ್ನು ತಲುಪಿದ್ದಕ್ಕಾಗಿ ಗೂಗಲ್ ಡೂಡಲ್ ಮೂಲಕ ಈ ಕ್ಷಣವನ್ನು ಚಿತ್ರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.