ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳೊಂದಿಗೆ ದೆಹಲಿಯ ಮಾನಿಕ್ಷಾ ಸೆಂಟರ್ನಲ್ಲಿ ಔಪಚಾರಿಕ ಸಮಾಲೋಚನೆ ನಡೆಸಿದರು.
ಎಲ್ಲಾ ಕ್ರೀಡಾಪಟುಗಳನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರನ್ನು ಹುರಿದುಂಬಿಸಿದರು, ಸ್ಫೂರ್ತಿದಾಯಕ ಮಾತಗಳನ್ನಾಡಿದರು. ಮೋದಿಯವರ ಈ ನಡೆಯಿಂದ ಸಂತುಷ್ಟರಾದ ಕ್ರೀಡಾಳುಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟರು.
‘ಒಲಿಂಪಿಕ್ನಲ್ಲಿ ಭಾಗವಹಿಸುವವರನ್ನು ಮೋದಿ ಭೇಟಿಯಾಗ ಬಯಸುತ್ತಿದ್ದಾರೆ ಎಂಬ ಸಂದೇಶ ಇಮೇಲ್ಗೆ ಬಂತು. ನಿಜಕ್ಕೂ ಇದು ಗ್ರೇಟ್, ಇದರೊಳಗಿನ ಅಜೆಂಡಾ ನನಗೆ ತಿಳಿದಿಲ್ಲ. ಆದರೆ ಒಲಿಂಪಿಕ್ ಸಿದ್ಧತೆ ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆಗೆ ಎಂದು ನಾನು ಭಾವಿಸಿದ್ದೇನೆ’ ಎಂದು ಒಲಿಂಪಿಕ್ ಪಡೆಯ ಮುಖ್ಯಸ್ಥ ರಾಕೇಶ್ ಗುಪ್ತಾ ಈ ಹಿಂದೆ ಹೇಳಿದ್ದರು.
ಅದರಂತೆ ಮೋದಿ ಇಂದು ಕ್ರೀಡಾಳುಗಳ ಸಮಸ್ಯೆ, ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು. ಅವರನ್ನು ಹುರಿದುಂಬಿಸಿ ಒಲಿಂಪಿಕ್ ಕಣಕ್ಕೆ ಬೀಳ್ಕೊಟ್ಟರು.
‘ಪ್ರಧಾನಿಯೊಬ್ಬರು ಒಲಿಂಪಿಕ್ ಪಡೆಗೆ ಬೀಳ್ಕೊಡುಗೆ ನೀಡುತ್ತಿರುವುದು ಇದೇ ಮೊದಲು. ನಿಜಕ್ಕೂ ಇದೊಂದು ಶ್ರೇಷ್ಠ ಸಾಂಕೇತಿಕ ನಡೆ’ ಎಂದು ಅಭಿನವ್ ಬಿಂದ್ರಾ ಟ್ವಿಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.