ನವದೆಹಲಿ: ಹೈದರಾಬಾದ್ನಲ್ಲಿ ಇತ್ತೀಚಿಗೆ ಬಂಧಿತರಾದ ಐದು ಮಂದಿ ಇಸಿಸ್ ಬೆಂಬಲಿಗ ಶಂಕಿತ ಉಗ್ರರು ಹಲವಾರು ಭಯಾನಕ ವಿಷಯಗಳನ್ನು ಒಂದೊಂದಾಗಿಯೇ ಬಹಿರಂಗಪಡಿಸುತ್ತಿದ್ದಾರೆ.
ಹವಾಲ ಮೂಲಕ ಮಿಡಲ್ ಈಸ್ಟ್ ದೇಶಗಳಿಂದ ಹಣವನ್ನು ಪಡೆದುಕೊಂಡಿರುವುದಾಗಿ ಹೇಳಿರುವ ಇವರು, ಇಸಿಸ್ ಜೊತೆ ಸಂಪರ್ಕ ಹೊಂದಿರುವುದನ್ನು ರಾಷ್ಟ್ರೀಯ ತನಿಖಾ ತಂಡದ ಮುಂದೆ ಒಪ್ಪಿಕೊಂಡಿದ್ದಾರೆ.
ಬಾಂಬ್ಗಳನ್ನು ಇರಿಸಿದ ಬಳಿಕ ಮತ್ತು ಬಾಂಬ್ ತಯಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೈದರಾಬಾದ್ನಲ್ಲಿ ಇವರು ಸುರಕ್ಷಿತ ಅಡಗುತಾಣಕ್ಕಾಗಿ ಹುಡುಕಾಡುತ್ತಿದ್ದರು ಎಂದು ಹೇಳಲಾಗಿದೆ.
ಪರಸ್ಪರ ಚರ್ಚೆ ನಡೆಸಲು ಇಮೇಲ್ ಮತ್ತು ಚಾಟ್ ವೇದಿಕೆಗಳನ್ನು ಇವರು ಬಳಸುತ್ತಿದ್ದರು, ಮಾತ್ರವಲ್ಲ ಇಸಿಸ್ ಮುಖಂಡ ಬಾಗ್ದಾದಿ ಜೊತೆ ಸಮಾಲೋಚನೆ ನಡೆಸಿ ಸಹಾಯಕ್ಕೆ ಮನವಿ ಮಾಡಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಈ ಬಂಧಿತರಿಂದ ೫೦ ಲಕ್ಷ ನಗದು, ಪಿಸ್ತೂಲ್, ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.