ಶಹರಣ್ಪುರ್: ಜನರ ಸೇವೆಗೆಂದು ಇರುವ ಸರ್ಕಾರಿ ಕಛೇರಿಗಳನ್ನು ಅಲ್ಲಿನ ಉದ್ಯೋಗಿಗಳು ಮದ್ಯದಂಗಡಿಯಾಗಿ ಪರಿವರ್ತಿಸುತ್ತಿದ್ದಾರೆ. ಶಹರಣ್ಪುರದ ಸರ್ಕಾರಿ ಕಛೇರಿಯ ಒಳಗಡೆಯೇ ಇಬ್ಬರು ಉದ್ಯೋಗಿಗಳು ಮದ್ಯ ಸೇವನೆ ಮಾಡಿದ್ದು ಮಾತ್ರವಲ್ಲ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರ ವಿರುದ್ಧ ಮುಗಿಬಿದ್ದು ಗಲಾಟೆಯೆಬ್ಬಿಸಿದ್ದಾರೆ.
ಕೇಂದ್ರ ಸರ್ಕಾರ ಉದ್ಯೋಗಿಗಳ ವೇತನವನ್ನು ಶೇ. 23.5 ರಷ್ಟು ಏರಿಸಿದ ಮರುದಿನವೇ ಈ ಘಟನೆ ಬೆಳಕಿಗೆ ಬಂದಿದೆ. ಕಛೇರಿಯಲ್ಲಿ ಕುಡಿದು ಗಲಾಟೆ ಮಾಡಿ, ಗ್ರಾಹಕರೊಂದಿಗೆ ಅಸಭ್ಯ ವರ್ತನೆ ತೋರಿದವರನ್ನು ಇದೀಗ ಬಂಧಿಸಿ ಜೈಲಿಗಟ್ಟಲಾಗಿದೆ.
ಶಹರಣ್ಪುರ ನನೋಟ ಬ್ಲಾಕ್ನಲ್ಲಿ ಈ ಘಟನೆ ನಡೆದಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಇವರು ಕುಡಿದಿರುವುದು ಸಾಬೀತಾಗಿದ್ದು, ಪ್ರಕರಣ ದಾಖಲು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.