ನವದೆಹಲಿ: ಹಣ ದುರುಪಯೋಗ ಆರೋಪ ಹೊತ್ತಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿರುದ್ಧ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ಯುಕೆ ಅಧಿಕಾರಿಗಳೊಂದಿಗೆ ಪರಸ್ಪರ ಕಾನೂನು ಸಹಾಯ ಒಡಂಬಡಿಕೆ ಒಪ್ಪಂದ (ಎಂಎಲ್ಎಟಿ) ಮಾಡಿಕೊಂಡಿದೆ.
ಹಣ ದುರುಪಯೋಗ ವಿಚಾರಣೆ ನಡೆಸಲು ಲಲಿತ್ ಮೋದಿ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಇಡಿ ಸಂಸ್ಥೆ ಎಂಎಲ್ಎಟಿ ಬಳಸಲು ನಿರ್ಧರಿಸಿದೆ.
ಎಂಎಲ್ಎಟಿ ಒಪ್ಪಂದದ ಮನವಿ ಪತ್ರವನ್ನು ಇಡಿ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದು, ಗೃಹ ಸಚಿವಾಲಯ ಯುಕೆ ಸಚಿವಾಲಯಕ್ಕೆ ವರ್ಗಾಯಿಸಲಿದೆ.
ಹಣ ದುರುಪಯೋಗ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ) ಉಲ್ಲಂಘನೆ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಇತರ ಬಿಜೆಪಿ ನಾಯಕರ ಜೊತೆ ಅನೈತಿಕ ಸಂಪರ್ಕ ಹೊಂದಿರುವ ವಿಚಾರ ಬೆಳಕಿಗೆ ಬಿದ್ದ ಬಳಿಕ ೨೦೧೪ರಲ್ಲಿ ಇಡಿ ಲಲಿತ್ ಮೋದಿ ವಿಚಾರಣೆಯಲ್ಲಿ ಮಧ್ಯ ಪ್ರವೇಶಿಸಿತ್ತು.
ಹಣ ದುರುಪಯೋಗದ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿದ ದೂರಿನ ಅನ್ಚಯ ಚೆನ್ನೈ ಪೊಲೀಸ್ ೨೦೧೦ರಲ್ಲಿ ದಾಖಲಿಸಿದ ಎಫ್ಐಆರ್ ಜೊತೆಗೆ ಇಡಿ ಲಲಿತ್ ಮೋದಿ ವಿರುದ್ಧ ಹಣ ದುರುಪಯೋಗ ತಡೆಗಟ್ಟುವಿಕೆ ಕಾಯ್ದೆ (ಪಿಎಂಎಲ್ಎ) ದಾಖಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.