ಹೈದರಾಬಾದ್: ಬಂಧಿತರಾದ ಐದು ಶಂಕಿತ ಭಯೋತ್ಪಾದಕರಿಗೆ ಕಾನೂನು ಸಲಹೆಗಾರರನ್ನು ನೇಮಿಸಲು ಮುಂದಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ.
ಹೈದರಾಬಾದ್ನಲ್ಲಿ ಪ್ರಕರಣ ದಾಖಲಾಗಿದೆ, ಮೀರತ್ ಕೋರ್ಟ್ನಲ್ಲಿ ಓವೈಸಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡುವಂತೆ ಪಿಟಿಷನ್ ಹಾಕಲಾಗಿದೆ.
ಹೈದರಾಬಾದ್ನಲ್ಲಿ ಇತ್ತೀಚಿಗೆ ಐವರು ಶಂಕಿತ ಇಸಿಸ್ ಬೆಂಬಲಗರನ್ನು ಬಂಧಿಸಲಾಗಿತ್ತು. ಇವರು ಹಲವಾರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂಬ ಅಂಶ ಬಳಿಕ ಬಯಲಾಗಿತ್ತು.
ಆದರೂ ಇವರಿಗೆ ವಕೀಲರನ್ನು ನೇಮಿಸಿ ಕಾನೂನು ನೆರವು ನೀಡಲು ಓವೈಸಿ ಮುಂದಾಗಿದ್ದ. ಇದನ್ನು ಬಿಜೆಪಿ ಮತ್ತು ಜೆಡಿಯು ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಮಾತ್ರವಲ್ಲ ಆತನ ಬಂಧನಕ್ಕೂ ಆಗ್ರಹಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.