ನವದೆಹಲಿ: ವಿಮಾನ ಸೌಲಭ್ಯ ಕಡಿಮೆ ಇರುವ ಅಥವಾ ಯಾವುದೇ ವಿಮಾನ ಸಂಚಾರ ಇಲ್ಲದ ಸಣ್ಣ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಿಮಾನ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ.
ಈ ಯೋಜನೆಯ ನೀಲ ನಕ್ಷೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಗಳು ಹಾಗೂ ವಿಮಾನಯಾನ ಕಂಪೆನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮೂರು ವಾರಗಳ ಅವಕಾಶ ನೀಡಿದೆ. 1 ಗಂಟೆ ಅಥವಾ 500 ಕಿ.ಮೀ. ಪ್ರಯಾಣಕ್ಕೆ ಗರಿಷ್ಟ 2,500 ರೂ.ಟಿಕೆಟ್ ದರ ನಿಗದಿಪಡಿಸುವ ಪ್ರಸ್ತಾಪವನ್ನು ಕೇಂದ್ರ ಸಲ್ಲಿಸಿದೆ. ಸಂಚಾರ ದಟ್ಟಣೆ ಹೆಚ್ಚಿರುವ ನಿಲ್ದಾಣಗಳಲ್ಲಿ ಟಿಕೆಟ್ ದರದ ಮೇಲೆ ಸರ್ಕಾರ ತೆರಿಗೆಯನ್ನು ವಿಧಿಸಲಿದೆ.
ವಿಮಾನ ಸೌಲಭ್ಯ ಕಡಿಮೆ ಇರುವ 16 ನಿಲ್ದಾಣಗಳು ಹಾಗೂ ತೀರಾ ವಿಮಾನ ಓಡಾಟ ಇಲ್ಲದ 396 ನಿಲ್ದಾಣಗಳು ಭಾರತದಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.