ಪಾಟ್ನಾ: ಸೂಪರ್ 30 ಸ್ಥಾಪಕರಾದ ಆನಂದ್ ಕುಮಾರ್ ಅವರಿಗೆ ಯುಎಸ್ಎಯ ಪ್ರತಿಷ್ಠಿತ ಎಂಐಟಿ ಜಾಬ್ ಆಫರ್ ನೀಡಿದ್ದು, ಓಪನ್ ಆನ್ಲೈನ್ ಯೋಜನೆ ಮೂಲಕ ಗಣಿತ ಉಪನ್ಯಾಸ ನೀಡುವಂತೆ ಕೇಳಿಕೊಂಡಿದೆ.
ಮಾಸಿವ್ ಓಪನ್ ಆನ್ಲೈನ್ ಕೋರ್ಸ್(ಎಂಒಒಸಿ) ಪ್ರೊವೈಡರ್ ಇಡಿಕ್ಸ್ ಮತ್ತು ಮಾಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಮತ್ತು ಹಾರ್ವರ್ಡ್ ಯೂನಿವರ್ಸಿಟಿಯಿಂದಲೂ ಅವರು ಜಾಬ್ ಆಫರ್ ಪಡೆದಿದ್ದಾರೆ ಎಂದು ಸೂಪರ್ ೩೦ ತಿಳಿಸಿದೆ.
ಇಂಗ್ಲೀಷ್, ಮ್ಯಾಂಡರೀನ್, ಫ್ರೆಂಚ್, ಸ್ಪ್ಯಾನಿಶ್ನಲ್ಲಿ ವಿಶ್ವದಾದ್ಯಂತ ಉಚಿತವಾಗಿಯೂ ಇಡಿಕ್ಸ್ ಆನ್ಲೈನ್ ಯೂನಿವರ್ಸಿಟಿ ಲೆವಲ್ ಕೋರ್ಸ್ಗಳನ್ನು ನೀಡುತ್ತಿದೆ. ಸಂಶೋಧನೆಗಳನ್ನೂ ನಡೆಸುತ್ತದೆ.
30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಐಐಟಿ ಪರೀಕ್ಷೆಯ ತರಬೇತಿ ನೀಡುವ ಆನಂದ್ ಕುಮಾರ್ ಭಾರೀ ಖ್ಯಾತಿಯನ್ನು ಪಡೆದಿದ್ದಾರೆ. ಅವರ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸ್ಸಾಗುತ್ತಿರುವುದೇ ಇದಕ್ಕೆ ಕಾರಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.