ನವದೆಹಲಿ: ಲೆಜೆಂಡರಿ ಅಥ್ಲೇಟ್ ಮಿಲ್ಕಾ ಸಿಂಗ್ ಅವರು ‘ರೀಡ್ ಇಂಡಿಯಾ’ ಯೋಜನೆಗೆ ಚಾಲನೆ ನೀಡಿದ್ದಾರೆ. 700 ಸರ್ಕಾರಿ ಶಾಲೆಗಳಲ್ಲಿ ಲೈಬ್ರರಿಗಳನ್ನು ಸ್ಥಾಪಿಸುವ ಯೋಜನೆ ಇದಾಗಿದ್ದು, 3.5 ಲಕ್ಷ ಬಡ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ.
ದೇಶದ ಅತೀ ದೊಡ್ಡ ಶಿಕ್ಷಣ ಪರಿಕರ ಪೂರೈಕೆದಾರರಾದ ಎಸ್.ಚಂದ್ ಗ್ರೂಪ್ನ ಸಹಾಯದಿಂದ ಪ್ರತಿ ಲೈಬ್ರರಿಯೂ 400 ಪುಸ್ತಕಗಳಿಂದ ಆರಂಭವಾಗಲಿದೆ.
ಕಿಂಡರ್ಗಾರ್ಟನ್ನಿಂದ ಹಿಡಿದು ೮ನೇ ತರಗತಿಯವರೆಗಿನ ಮಕ್ಕಳಿಗೆ ಈ ಪುಸ್ತಕಗಳು ಉಚಿತವಾಗಿ ಲಭ್ಯವಾಗಲಿದೆ. ವಿಜ್ಞಾನ, ಗಣಿತ, ಸಾಮಾನ್ಯ ವಿಷಯ, ಸಾಮಾನ್ಯ ಜ್ಞಾನದ ವಿಷಯಗಳ ಪುಸ್ತಕಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಈ ಯೋಜನೆಗೆ 4 ಕೋಟಿ ವ್ಯಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.