ಮುಂಬಯಿ: ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರೀ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಮಿತಿಯಲ್ಲಿ ಶಾಸ್ತ್ರೀ ಮಾಧ್ಯಮ ಪ್ರತಿನಿಧಿಯ ಹುದ್ದೆ ಹೊಮಡಿದ್ದರು.
‘ಕಳೆದ 6 ವರ್ಷದಿಂದ ಕ್ರಿಕೆಟ್ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ, ಇದೀಗ ವೈಯಕ್ತಿಕ ಬದ್ಧತೆಗಳ ಕಾರಣದಿಂದ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಶಾಸ್ತ್ರೀ ಹೇಳಿದ್ದಾರೆ.
ಮಾಧ್ಯಮ ಕಮೆಂಟೇಟರ್ ಆಗಿ, ಅಂಕಣಕಾರನಾಗಿ, ಟಿವಿ ತಜ್ಞನಾಗಿ ಬ್ಯೂಸಿಯಾಗಿರುವುದೇ ರಾಜೀನಾಮೆ ಅಧಿಕೃತ ಕಾರಣ ಎಂದು ಅವರು ತಿಳಿಸಿದ್ದರೂ, ಕೋಚ್ ಹುದ್ದೆಗೆ ತಿರಸ್ಕೃತನಾಗಿರುವುದೇ ಅವರ ಈ ನಡೆಗೆ ಕಾರಣ ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.