ನವದೆಹಲಿ: ಭಾರತದ ಇಬ್ಬರು ಹಾಕಿ ಲೆಜೆಂಡ್ಗಳು ಈಗ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ಭಾರತೀಯರ ಪ್ರಾರ್ಥನೆಯ ಅಗತ್ಯವಿದೆ.
65 ವರ್ಷದ ಬಿಪಿ ಗೋವಿಂದ, 1975ರ ಪುರುಷರ ಹಾಕಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದವರು ಆದರೆ ಈಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ. ಅವರ ಲಂಗ್ಸ್ನಲ್ಲಿ ರಕ್ತ ಸೋರುತ್ತಿದೆ. ಕುಸಿದು ಬಿದ್ದ ಪರಿಣಾಮ ಆಸ್ಪತ್ರೆಗೆ ಸೇರಿಸಲಾಗಿದೆ.
3 ಎಷ್ಯಾ ಗೇಮ್ಸ್ ಮತ್ತು 1972ರಲ್ಲಿ ವರ್ಲ್ಡ್ ಹಾಕಿನಲ್ಲಿ ಆಡಿದ ಕೀರ್ತಿ ಇವರದ್ದು.
ಜೀವನ್ಮರಣ ಹೋರಾಟ ನಡೆಸುತ್ತಿರವ ಮತ್ತೋರ್ವ ಹಾಕಿ ಪಟು ಮೊಹಮ್ಮದ್ ಶಹೀದ್. 56 ವರ್ಷದ ಇವರು ಪ್ರಸ್ತುತ ಗೋರೆಗಾವ್ ಆಸ್ಪತ್ರೆಯಲ್ಲಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವ ಇವರ ಲಿವರ್ ಹಾನಿಗೊಳಗಾಗಿದೆ.
1980ರ ಒಲಿಂಪಿಕ್ ಟೀಮ್ನಲ್ಲಿದ್ದ ಇವರಿಗೆ 1986ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿದೆ.
ಇವರ ಆರೋಗ್ಯ ಸುಧಾರಣೆಗೆ ವೈದ್ಯರು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಭಾರತೀಯ ಹಾಕಿ ಅಭಿಮಾನಿಗಳ ಪ್ರಾರ್ಥನೆಯ ಅಗತ್ಯವೂ ಇವರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.