ಮುಂಬಯಿ: ರಿಂಗಿಂಗ್ ಬೆಲ್ಸ್ನ ಫ್ರೀಡಂ 251 ಸ್ಮಾರ್ಟ್ಫೋನ್ಗಳು ಕೇವಲ 251 ರೂಪಾಯಿಗೆ ಮಾರಾಟವಾಗಲಿದೆ, ಫೆಬ್ರವರಿ ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ವಿಶ್ವದ ಅತೀ ಅಗ್ಗದ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇಷ್ಟೊಂದು ಕಡಿಮೆ ಬೆಲೆಗೆ ದೊರಕುವುದರಿಂದ ದೇಶದ ಪ್ರತಿಯೊಬ್ಬ ಬಡವನೂ ಸ್ಮಾರ್ಟ್ ಫೋನ್ಗಳನ್ನು ಹೊಂದುವ ಕಾಲ ದೂರವಿಲ್ಲ. ಆದರೆ ಚೀಪ್ ಹ್ಯಾಂಡ್ಸೆಟ್ಗಳು, ಟ್ಯಾಬ್ಲೆಟ್ಗಳು ದೇಶದ ಕಾರ್ಮಿಕ ವರ್ಗದ ಹಕ್ಕಗಳನ್ನು ದೌರ್ಜನ್ಯಕ್ಕೊಳಪಡಿಸಲಿದೆ ಎಂಬ ಆತಂಕವನ್ನು ಕಾರ್ಮಿಕ ಹಕ್ಕುಗಳ ಹೋರಾಟಗಾರರು ವ್ಯಕ್ತಪಡಿಸಿದ್ದಾರೆ.
ಆದರೆ ರಿಂಗಿಂಗ್ ಬೆಲ್ಸ್ ಮಾತ್ರ ತನ್ನ ಕಂಪನಿಯಲ್ಲಿ ದುಡಿಯುವ ಎಲ್ಲಾ ಕಾರ್ಮಿಕರಿಗೂ ಉತ್ತಮ ವೇತನವನ್ನು ನೀಡಿ, ಅವರ ಹಕ್ಕುಗಳನ್ನು ರಕ್ಷಿಸುತ್ತೇವೆ. ಫೋನಿನ ಪ್ರೈಸಿಯರ್ ಮಾಡೆಲ್ ಯುಎಸ್ಡಿ4 ಸೆಟ್ನ ತಯಾರಿಕ ವೆಚ್ಚವನ್ನು ಸರಿದೂಗಿಸಲಿದೆ. ನಮ್ಮ ಉದ್ದೇಶ ಭಾರತೀಯ ಬಡವರಿಗೆ ಸ್ಮಾರ್ಟ್ಫೋನ್ಗಳು ಎಟಕುವಂತೆ ಮಾಡುವುದೇ ಹೊರತು ಅವರನ್ನು ದೌರ್ಜನ್ಯಕ್ಕೀಡು ಮಾಡುವುದಲ್ಲ ಎಂದು ಹೇಳಿಕೊಂಡಿದೆ.
ಕಳೆದ ವರ್ಷ ಭಾರತ 103 ಮಿಲಿಯನ್ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಿದ್ದು, ಈ ವರ್ಷ ಅದು ಶೇ.29ರಷ್ಟು ಏರಿಕೆ ಕಂಡಿದೆ.
ಕಡಿಮೆ ವೆಚ್ಚದ ಮೊಬೈಲ್ ತಯಾರಿಕ ಕಂಪನಿಗಳು ತಮ್ಮ ಕಾರ್ಮಿಕರ ಕಡಿಮೆ ವೇತನ ನೀಡುವ ಅಥವಾ ಕಡಿಮೆ ಕಾಂಟ್ರ್ಯಾಕ್ಟ್ ನೀಡುವ ಭಯವೂ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.