ದುಬೈ: ಭಾರತೀಯ ಒಡೆತನದ ಆಹಾರ ಆಮದು ಕಂಪೆನಿ ಯು.ಎ.ಇ.ನ ಅಜ್ಮಾನ್ನಲ್ಲಿ 95.2 ಮಿಲಿಯನ್ ಬಂಡವಾಳದೊಂದಿಗೆ ತನ್ನ ಹೊಸ ಆಹಾರ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ.
ಅರಬ್&ಇಂಡಿಯಾ ಸ್ಪೈಸಸ್ 70 ವರ್ಷಗಳಷ್ಟು ಹಳೆಯ ಕಂಪೆನಿಯಾಗಿದ್ದು, ಗಲ್ಫ್ ರಾಷ್ಟ್ರದಲ್ಲಿ ಕಾಳುಗಳು, ದವಸ-ಧಾನ್ಯಗಳು ಮತ್ತು ಮಸಾಲೆ ಪಾದರ್ಥಗಳ ಆಮದು ಹಾಗೂ ಉತ್ಪಾದನೆ ಮಡುತ್ತಿರುವ ಮೊದಲ ಮತ್ತು ಅತೀ ದೊಡ್ಡ ಕಂಪೆನಿಯಾಗಿದೆ.
ಕಂಪೆನಿಯು ವಿಶ್ವದಾದ್ಯಂತ ಇತರ ರಾಷ್ಟ್ರಗಳಿಂದ ಗುತ್ತಿಗೆ ಆಧಾರದಲ್ಲಿ ನೂರಾರು ಟನ್ಗಳಷ್ಟು ದ್ವಿದಳ ಧಾನ್ಯಗಳು, ಕಾಳುಗಳು, ಮಸಾಲೆ ಪದಾರ್ಥಗಳನ್ನು ದಾಖಲೆ ಮಟ್ಟದಲ್ಲಿ ಆಮದು ಮಾಡುತ್ತಿದೆ.
400 ಚದರ ಅಡಿ ಸ್ಥಳದಲ್ಲಿ ತನ್ನ ಸಂಸ್ಥೆ ಆರಂಭಿಸಿದ ಅರಬ್&ಇಂಡಿಯಾ ಸ್ಪೈಸಸ್ ಈಗ 4,00,000 ಚದರ ಅಡಿ ಸ್ಥಳದ ತನ್ನ ಘಟಕದಲ್ಲಿ ಉತ್ಪಾದನೆ ಪ್ರಕ್ರಿಯೆ ನಡೆಸುತ್ತಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್ ಲಾಲ್ ತಹಿಲಿಯಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.