ಅನಾಥ, ಬಡ ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪುಣೆಯ ಜಿಲ್ಲಾಧಿಕಾರಿ ’ಮಿಶನ್ ಧನ್ವಂತರಿ’ ಅಭಿಯಾನವನ್ನು ಆರಂಭಿಸಿದ್ದಾರೆ.
ಆರು ವರ್ಷದ ಬಾಲಕಿ ವೈಶಾಲಿ ಯಾದವ್ ಪ್ರಧಾನ ಮಂತ್ರಿ ಸಚಿವಾಲಯದ ನೆರವಿನೊಂದಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಳು, ಇದರಿಂದ ಪ್ರೇರಿತರಾಗಿ ಪುಣೆ ಜಿಲ್ಲಾಧಿಕಾರಿ ಇಂತಹ ಮಹತ್ವದ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಮೂಲಕ ಅಗತ್ಯವಿರುವ ಮಕ್ಕಳಿಗೆ ಚಿಕಿತ್ಸೆಗಾಗಿ ಹಣಕಾಸು ನೆರವು ಅಥವಾ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ.
ಈಗಾಗಲೇ ವಿವಿಧ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿರುವ ಚಿಕಿತ್ಸೆಯ ಅಗತ್ಯವಿರುವ 160 ಬಡ ಮಕ್ಕಳನ್ನು ಗುರುತಿಸಲಾಗಿದ್ದು, ಅವರಿಗೆ ಉಚಿತ ಚಿಕಿತ್ಸೆ ನೀಡುವ ಕಾರ್ಯ ನಡೆಯುತ್ತಿದೆ.
ಕಾರ್ಪೋರೇಟ್ ಸೋಶಲ್ ರೆಸ್ಪಾನ್ಸ್ಬಿಲಿಟಿ ಫಂಡ್, ಇತರ ಸರ್ಕಾರದ ಯೋಜನೆಯಡಿ ಇವರ ಚಿಕಿತ್ಸೆಗೆ ಹಣ ವ್ಯಯ ಮಾಡಲಾಗುತ್ತದೆ. ಟೋಲ್ ಫ್ರೀ ನಂಬರ್ನ್ನೂ ಆರಂಭಿಸಲಾಗಿದ್ದು, ಅಗತ್ಯವಿರುವವರು ಸಹಾಯ ಕೇಳಬಹುದು.
ಸಹಾಯಕ್ಕೆ ಮುಂದಾಗುವ ಮುನ್ನ ಮಕ್ಕಳ ಕುಟುಂಬ ಹಿನ್ನಲೆಯನ್ನು ಸ್ಪಷ್ಟವಾಗಿ ಪರಿಶೀಲನೆ ನಡೆಸಲಾಗುತ್ತದೆ.
ವೈಶಾಲಿ ಮೋದಿಗೆ ಪತ್ರ ಬರೆದು ಚಿಕಿತ್ಸೆಗೆ ಸಹಾಯ ಪಡೆದುಕೊಂಡವಳು, ಆಕೆಯ ಕಾರ್ಯವೇ ಪುಣೆ ಜಿಲ್ಲಾಧಿಕಾರಿಗೆ ’ಮಿಶನ್ ಧನ್ವಂತರಿ’ ಯೋಜನೆ ಆರಂಭಿಸಲು ಪ್ರೇರಣೆ ಎಂಬುದು ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.