ರಸ್ತೆಯಲ್ಲಿ ಅನಾಥವಾದ ಮಗುವೊಂದು ಕಂಡರೆ ಅಲ್ಲಿ ಓಡಾಡುವ ಜನರ ಸ್ಪಂದನೆ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಕಳೆದ ವರ್ಷ ಯೂಟ್ಯೂಬ್ ಚಾನೆಲ್ ’ಡೆನ್ನೆಸ್ಸೀಟಿವಿ’ ಸಾಮಾಜಿಕ ಪ್ರಯೋಗವೊಂದನ್ನು ಮಾಡಿತ್ತು. ಇದೀಗ ಯುನಿಸೆಫ್ ಕೂಡ ಅಂತಹುದೇ ಒಂದು ಪ್ರಯೋಗವನ್ನು ಮಾಡಿ ಜನರ ವರ್ತನೆಯನ್ನು ಕಂಡು ಕೊಂಡಿದೆ.
ಜಾರ್ಜಿಯಾದ ರಸ್ತೆಯೊಂದರಲ್ಲಿ ಆರು ವರ್ಷದ ಅನನೋ ಎಂಬ ಬಾಲಕಿಗೆ ಸುಂದರವಾದ ಉಡುಪನ್ನು ಹಾಕಿಸಿ ನಿಲ್ಲಿಸಲಾಗಿತ್ತು. ಆಕೆಯ ಸುತ್ತಮುತ್ತ ಜನರಿಗೆ ತಿಳಿಯದಂತೆ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆಕೆ ಕಳೆದು ಹೋದ ಬಾಲಕಿಯಂತೆ ಫೋಸ್ ನೀಡುತ್ತಿದ್ದಳು. ಆಕೆಯ ಬಳಿ ಬಂದ ಜನ ಆಕೆಯ ಹೆಸರನ್ನು ಕೇಳಿ, ನೀನು ಕಳೆದು ಹೋಗಿದ್ದೀಯಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು.
ಕೆಲವೇ ಕ್ಷಣಗಳ ಬಳಿಕ ಅದೇ ಬಾಲಕಿಗೆ ನಿರ್ಗತಿಕಳಂತೆ ದಿರಿಸನ್ನು ಧರಿಸಿ ಅದೇ ಸ್ಥಳದಲ್ಲಿ ನಿಲ್ಲಿಸಲಾಯಿತು. ಆದರೆ ಒಬ್ಬನೇ ಒಬ್ಬ ದಾರಿಹೋಕನೂ ಆಕೆಯತ್ತ ಕಣ್ಣು ಹಾಯಿಸಿ ನೋಡಲಿಲ್ಲ. ಆಕೆ ಕಳೆದು ಹೋದವಳೇ, ಆಕೆಯ ಹೆಸರು ಏನು ಎಂದೂ ಪ್ರಶ್ನಿಸಲಿಲ್ಲ.
ಬಡ ಮತ್ತು ಸಿರಿವಂತ ಮಕ್ಕಳ ನಡುವೆ ಜನ ಎಷ್ಟೊಂದು ತಾರತಮ್ಯ ಮಾಡುತ್ತಾರೆ ಎಂಬುದು ಇದರಲ್ಲಿ ತಿಳಿದು ಬಂದಿದೆ. ಬಡ ಮಕ್ಕಳು ಕಾಣೆಯಾದರೆ ಅವರತ್ತ ನೋಡದಷ್ಟು ಹೃದಯಹೀನತೆಯನ್ನು ಜನ ಹೊಂದಿದ್ದಾರೆ.
ಬಳಿಕ ರೆಸ್ಟೋರೆಂಟ್ವೊಂದರಲ್ಲೂ ಇದೇ ತರನಾದ ಪ್ರಯೋಗ ಮಾಡಲಾಗಿದ್ದು, ಅಲ್ಲೂ ಜನರ ವರ್ತನೆ ಬಡ, ಸಿರಿವಂತ ಬಾಲಕಿಯ ಬಗ್ಗೆ ಹೀಗೆಯೇ ಇತ್ತು. ವ್ಯತ್ಯಾಸವೆಂದರೆ ರೆಸ್ಟೋರೆಂಟ್ ಒಳಗೆ ಅತ್ತ ಇತ್ತ ಸುಳಿದಾಡುತ್ತಿದ್ದ ಬಡ ಬಾಲಕಿಯನ್ನು ಅಲ್ಲಿದ್ದ ಜನ ನೋಡುತ್ತಿದ್ದರು. ಆಕೆ ಕೆಲವರ ಟೇಬಲ್ ಬಳಿ ಹೋಗಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೋದಾಗ ಆಕೆಯನ್ನು ಬೇರೆಡೆ ಹೋಗು ಎಂದು ಹಲವರು ಹೇಳಿದರೆ, ಇನ್ನೊಬ್ಬರು ರೆಸ್ಟೋರೆಂಟ್ ವೇಟರ್ ಕರೆದು ಆಕೆಯನ್ನು ಬೇರೆಡೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ.
ಈ ವೀಡಿಯೋ ಫೇಸ್ಬುಕ್ನಲ್ಲಿ ವೈರಲ್ ಆಗಿದ್ದು, 1.4 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಬಡ ಮತ್ತು ಶ್ರೀಮಂತ ಮಕ್ಕಳ ಬಗೆಗಿನ ಜನರ ತಾರತಮ್ಯ ಧೋರಣೆ ಇದರಲ್ಲಿ ಬಯಲಾಗಿದೆ.
ನೀವೂ ಒಮ್ಮೆ ವೀಡಿಯೋ ನೋಡಿ :
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.