ನವದೆಹಲಿ: ದ್ವಿದಳ ಧಾನ್ಯಗಳ ಬೆಲೆ ತೀವ್ರವಾಗಿ ಏರುತ್ತಿದ್ದು, ಇದನ್ನು ಪರಿಶೀಲಿಸಲು ಭಾರತ ಮುಂದಿನ 5 ವರ್ಷಗಳ ಕಾಲ ಮೊಜಾಂಬಿಕ್ನಿಂದ ತೊಗರಿ ಬೇಳೆಯನ್ನು ಖರೀದಿಸಲು ಮುಂದಾಗಿದೆ.
ಕಳೆದ ಎರಡು ವರ್ಷಗಳಿಂದ ಬರದ ಹಿನ್ನೆಲೆಯಲ್ಲಿ ಸ್ಥಳೀಯ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ದ್ವಿದಳ ಧಾನ್ಯಗಳ ಬೆಲೆ ಪ್ರತಿ ಕೆ.ಜಿ.ಗೆ ರೂ.198 ತಲುಪಿದೆ. ಆದ್ದರಿಂದ ಭಾರತ ಮುಂದಿನ 5 ವರ್ಷಗಳ ಕಾಲ ತೊಗರಿ ಬೇಳೆ ಪೂರೈಸುವಂತೆ ಮೊಜಾಂಬಿಕ್ ಸರ್ಕಾರಕ್ಕೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತವು ಸಾರಿಗೆ ವೆಚ್ಚದ ಜೊತೆಗೆ ಕನಿಷ್ಟ ಬೆಂಬಲ ಬೆಲೆಗೆ ತೊಗರಿ ಬೇಳೆ ಖರೀದಿಗೆ ಪ್ರಸ್ತಾಪ ಸಲ್ಲಿಸಿದ್ದು, ಆಫ್ರಿಕನ್ ರಾಷ್ಟ್ರ ಮೊಜಾಂಬಿಕ್ ಸರ್ಕಾರದ ಪ್ರತಿಕ್ರಿಯೆ ಇನ್ನಷ್ಟೇ ದೊರೆಯಬೇಕಿದೆ ಎಂದು ಹೇಳಿದೆ.
ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಹೇಮ್ ಪಾಂಡೆ ನೇತೃತ್ವದ ಭಾರತ ತಂಡ ಇತ್ತೀಚೆಗೆ ದೀರ್ಘ ಕಾಲದ ತೊಗರಿ ಬೇಳೆ ಸರಬರಾಜು ವ್ಯವಸ್ಥೆ ಮಾತುಕತೆಗೆ ಮೊಜಾಂಬಿಕ್ಗೆ ಭೇಟಿ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.