ಬೀಜಿಂಗ್: ಚೀನಾದೊಂದಿಗೆ ಭಾರತ ಸಾಕಷ್ಟು ಸಮಸ್ಯೆಗಳನ್ನು ಹೊಂದಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಚೀನಾ ರಕ್ಷಣಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ.
‘ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನು ನ್ಯಾಯ ಸಮ್ಮತ, ಸೂಕ್ಷ್ಮ ಮತ್ತು ಪರಸ್ಪರ ಒಮ್ಮತದಿಂದ ಬಗೆಹರಿಸಿಕೊಳ್ಳಲು’ ನವದೆಹಲಿಯೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಚೀನಾ ಹೇಳಿದೆ.
ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ, ’ಇತ್ತೀಚಿನ ವರದಿಯನ್ನು ನಾವು ಗಮನಿಸಿದ್ದೇವೆ, ಭಾರತ-ಚೀನಾ ಸಂಬಂಧ ವಾಸ್ತವವಾಗಿ ಚೆನ್ನಾಗಿಯೇ ಇದೆ’ ಎಂದಿದ್ದಾರೆ.
ಉಭಯ ದೇಶಗಳ ಸಮಾನ ಹಿತಾಸಕ್ತಿಗಳು ಭಿನ್ನಾಭಿಪ್ರಾಯವನ್ನು ದೂರಗೊಳಿಸಿವೆ. ಚೀನಾ ಭಾರತದ ಜೊತೆ ಸೇರಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಸಲುವಾಗಿ ಕಾರ್ಯ ಮಾಡಲಿದೆ ಎಂದಿದ್ದಾರೆ.
‘ಚೀನಾದೊಂದಿಗೆ ಬರೀ ಒಂದು ಸಮಸ್ಯೆಯಲ್ಲ, ಸಾಕಷ್ಟು ಸಮಸ್ಯೆಗಳಿವೆ. ಚೀನಾದೊಂದಿಗೆ ಮಾತುಕತೆ ನಡೆಯುತ್ತಿದೆ, ಮುಂದೆಯೂ ನಡೆಯಲಿದೆ. ಸಾಕಷ್ಟು ವಿಷಯಗಳು ಉಭಯ ದೇಶಗಳ ನಡುವಿದೆ’ ಎಂದು ಮೋದಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.