ಇಸ್ಲಾಮಾಬಾದ್: ಎನ್ಎಸ್ಜಿ ಸದಸ್ಯತ್ವವನ್ನು ಪಡೆಯಲು ಭಾರತ ನಡೆಸಿದ್ದ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಪಾಕ್ನ ವಿದೇಶಾಂಗ ವ್ಯವಹಾರಗಳ ಸಲಹಾಗಾರ ಸರ್ತಾಜ್ ಅಜೀಜ್, ’ಮೆರಿಟ್ ಹಾಗೂ ತಾರತಮ್ಯವಿಲ್ಲದ ಆಧಾರದಲ್ಲಿ ಎನ್ಎಸ್ಜಿ ಸದಸ್ಯತ್ವ ಪಡೆಯುವುದಕ್ಕೆ ಪಾಕಿಸ್ಥಾನ ಅರ್ಹವಾಗಿದ’ ಎಂದಿದ್ದಾರೆ.
ಅಲ್ಲದೇ ಭಾರತದ ಎನ್ಎಸ್ಜಿ ಸದಸ್ಯತ್ವ ಪಡೆಯದಂತೆ ಮಾಡಲು ಬೇಕಾದ ಎಲ್ಲಾ ಯಶಸ್ವಿ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಸಿಯೋಲ್ನಲ್ಲಿ 48 ರಾಷ್ಟ್ರಗಳನ್ನೊಳಗೊಂಡ ಎನ್ಎಸ್ಜಿ ಮೀಟಿಂಗ್ಗೂ ಮುಂಚಿತವಾಗಿ ಪಾಕ್ ಈ ಹೇಳಿಕೆಯನ್ನು ನೀಡಿದೆ.
ಅಷ್ಟೇ ಅಲ್ಲದೇ ನರೇಂದ್ರ ಮೋದಿಯವರು ಇತ್ತೀಚಿಗೆ ನೀಡಿದ ಮುಸ್ಲಿಂ ರಾಷ್ಟ್ರಗಳ ಭೇಟಿಯಿಂದ ಪಾಕಿಸ್ಥಾನಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.