ಲಂಡನ್: ಮೊದಲ ಮಹಾಯುದ್ಧದ ಶತಮಾನೋತ್ಸವ ಆಚರಣೆಯ ಅಂಗವಾಗಿ ಆರು ಮಂದಿ ಭಾರತೀಯರು ಸೇರಿದಂತೆ ವಿಶ್ವದಾದ್ಯಂತ ಯುದ್ಧ ವೀರರ ಸ್ಫೂರ್ತಿದಾಯಕ ಕಥೆಗಳನ್ನು ಹೇಳುವ ಹೊಸ ಡಿಜಿಟಲ್ ಆರ್ಚಿವ್ನ್ನು ಯುಕೆಯಲ್ಲಿ ಬ್ರಿಟಿಷ್ ಸರ್ಕಾರ ಪ್ರಾರಂಭಿಸಿದೆ.
ಯದ್ಧದ ಸಂದರ್ಭದಲ್ಲಿ 11 ಸಾಗರೋತ್ತರ ರಾಷ್ಟ್ರಗಳ ಸುಮಾರು 175 ಯೋಧರಿಗೆ ಬ್ರಿಟನ್ನ ಅತ್ಯುನ್ನತ ’ವಿಕ್ಟೋರಿಯಾ ಕ್ರಾಸ್’ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಅಂದಿನ ಅವಿಭಜಿತ ಭಾರತದ ಭಾರತೀಯ ಬ್ರಿಟಿಷ್ ಸೇನೆಯಲ್ಲಿ ಹೋರಾಡಿದ ಆರು ಸೈನಿಕರ ಸ್ಮರಣಾರ್ಥ 2014 ರಲ್ಲಿ ಫಲಕ ನೀಡಿ ಗೌರವಿಸಲಾಗಿತ್ತು.
ಸ್ಮಾರಕದ ಫಲಕಗಳ ಮೇಲೆ ಕೆತ್ತಲಾದ ಪ್ರತಿಯೊಂದು ಯೋಧನ ಹೆಸರಿನ ಹಿಂದೆ ಒಂದು ನಿಜವಾದ ಗಮನಾರ್ಹವಾದ ಕಥೆ ಇದೆ. ಸಾಗರೋತ್ತರ ರಾಷ್ಟ್ರಗಳ ’ವಿಕ್ಟೋರಿಯಾ ಕ್ರಾಸ್’ ಗೌರವ ಪುರಸ್ಕೃತರ ಕಥೆಗಳನ್ನು ಡಿಜಿಟಲ್ ಆರ್ಚಿವ್ನಲ್ಲಿ ಒಂದುಗೂಡಿಸುವ ಮೂಲಕ ಅವರಿಗೆ ಗೌರವಿಸಬೇಕು ಎಂದು ವಿದೇಶ ಮತ್ತು ಕಾಮನ್ವೆಲ್ತ್ ಕಚೇರಿ(ಎಫ್ಸಿಒ) ಸಚಿವ ಹ್ಯೂಗೋ ಸ್ವೇರ್ ಹೇಳಿದ್ದಾರೆ.
ಪಂಜಾಬ್ನ ರಿಸಾಲ್ದಾರ್ ಬದ್ಲು ಸಿಂಗ್, ಉತ್ತರ ಪ್ರದೇಶದ ಸಿಪಾಯಿ ಚಟ್ಟಾ ಸಿಂಗ್, ಉತ್ತರಾಖಂಡದ ನೈಕ್ ಧವನ್ ಸಿಂಗ್ ನೇಗಿ ಹಾಗೂ ಬಂದೂಕುಧಾರಿ ಸಿಪಾಯಿ ಗಬರ್ ಸಿಂಗ್ ನೇಗಿ, ರಾಜಸ್ಥಾನದ ಲ್ಯಾನ್ಸ್ ದಫಾದಾರ್ ಗೋಬಿಂದ್ ಸಿಂಗ್ ಮತ್ತು ಹಿಮಾಚಲ ಪ್ರಧೇಶದ ಲ್ಯಾನ್ಸ್ ನಾಯಕ್ ಲಾಲಾ ಅವರ ವೈಯಕ್ತಿಕ ಜೀವನಚರಿತ್ರೆಯನ್ನು ಬಿಂಬಿಸುವ ಹೊಸ ಡಿಜಿಟಲ್ ಆರ್ಚಿವ್ನ್ನು ಬಿಡುಗಡೆ ಮಾಡಲಾಗಿದೆ.
ಮೊದಲ ಮಹಾಯುದ್ಧದಲ್ಲಿ ಇವರು ತೋರಿದ ಶೌರ್ಯಕ್ಕಾಗಿ ಈ ಗೌರವ ಪ್ರಶಸ್ತಿ ನೀಡಲಾಗಿದೆ.
ವಿಕ್ಟೋರಿಯಾ ಕ್ರಾಸ್ ಪ್ರಶಸ್ತಿಯನ್ನು ಭಾರತದ 6 ಮಂದಿ ಅಲ್ಲದೇ ಪಾಕಿಸ್ಥಾನದ 3, ನೇಪಾಳದ 2, ಕೆನಡಾದ 70, ಆಸ್ಟ್ರೇಲಿಯಾದ 66, ನ್ಯೂಜಿಲ್ಯಾಂಡ್ನ 16, ದಕ್ಷಿಣ ಆಫ್ರಿಕಾದ 14, ಅಮೇರಿಕಾದ 5, ಡೆನ್ಮಾರ್ಕ್ನ 2, ಬೆಲ್ಜಿಯಂನ ಒಬ್ಬರು ಹಾಗೂ ಉಕ್ರೇನ್ನ ಒಬ್ಬರಿಗೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.