ನವದೆಹಲಿ: ರೈತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದೇ ಎಎಪಿ ನಾಯಕರುಗಳು ಮತ್ತು ಕಾರ್ಯಕರ್ತರು’ ಎಂದು ರೈತನ ಸಾವಿನ ಬಗೆಗಿನ ಎಫ್ಐಆರ್ನಲ್ಲಿ ದೆಹಲಿ ಪೊಲೀಸರು ನಮೋದಿಸಿದ್ದಾರೆ.
ಅಲ್ಲದೇ ಘಟನೆ ನಡೆದ ಸ್ಥಳಕ್ಕೆ ಆಗ್ನಿಶಾಮಕ ವಾಹನಗಳನ್ನು ತೆರಳದಂತೆ ಸಮಾವೇಶದಲ್ಲಿ ಎಎಪಿ ಕಾರ್ಯಕರ್ತರು ತಡೆದರು ಎಂದು ಪೊಲೀಸರು ಗಂಭೀರ ಆರೋಪ ಮಾಡಿದರು.
‘ಆತ್ಮಹತ್ಯೆಯ ಬಗ್ಗೆ ವೈರ್ಲೆಸ್ ಫೋನಿನಲ್ಲಿ ಕಂಟ್ರೋಲ್ ರೂಮ್ಗೆ ನಾನು ಮಾಹಿತಿ ನೀಡಿದೆ. ಎಎಪಿ ಕಾರ್ಯಕರ್ತರನ್ನು ಮತ್ತು ಅಲ್ಲಿದ್ದ ಇತರರನ್ನು ಮರಕ್ಕೆ ಹತ್ತಿ ಗಜೇಂದ್ರನನ್ನು ಕಾಪಾಡುವಂತೆ ಮನವಿ ಮಾಡಿದೆ. ವಾಹನ ಹೋಗಲು ಅನುವು ಮಾಡಿಕೊಡುವಂತೆಯೂ ಕಾರ್ಯಕರ್ತರಲ್ಲಿ ವಿನಂತಿಸಿದೆವು. ಆದರೆ ಅವರು ಪೊಲೀಸರು ಎಎಪಿಗೆ ವಿರುದ್ಧವಿದ್ದಾರೆ, ಸಮಾವೇಶ ನಡೆಸಲು ಬಿಡಲಿಲ್ಲ ಎಂದು ಹೇಳಿದರು’ ಎಂದು ಸಮಾವೇಶದ ವೇಳೆ ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್ ಎಸ್ಎಸ್ ಯಾದವ್ ಎಫ್ಐಆರ್ನಲ್ಲಿ ಹೇಳಿದ್ದಾರೆ.
ಪೊಲೀಸರ ಆರೋಪವನ್ನು ಎಎಪಿ ತಳ್ಳಿ ಹಾಕಿದೆ.
ಇನ್ನೊಂದೆಡೆ ಮೃತ ರೈತ ಗಜೇಂದ್ರ ಸಿಂಗ್ ಅವರ ಕುಟುಂಬ ಸದಸ್ಯರಿಗೆ ರೂ.10 ಲಕ್ಷ ಪರಿಹಾರ ನೀಡುವುದಾಗಿ ಎಎಪಿ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.