ವಾಷಿಂಗ್ಟನ್: ಪರಮಾಣು ಪೂರೈಕಾ ಗುಂಪು(ಎನ್ಎಸ್ಜಿ)ಗೆ ಸೇರ್ಪಡೆಗೊಳ್ಳಲು ಭಾರತಕ್ಕೆ ಬೆಂಬಲ ನೀಡುವಂತೆ ಎಲ್ಲಾ ಎನ್ಎಸ್ಜಿ ದೇಶಗಳನ್ನು ಅಮೆರಿಕಾ ಕೇಳಿಕೊಂಡಿದೆ.
’ಭಾರತ ಸದಸ್ಯತ್ವ ಪಡೆಯಲು ಸಿದ್ಧವಾಗಿದೆ ಎಂಬುದು ನಮ್ಮ ನಂಬಿಕೆ ಮತ್ತು ನಮ್ಮ ನಿಯಮವಾಗಿದೆ. ಹೀಗಾಗಿ ಎನ್ಎಸ್ಜಿಯ ಪ್ಲೆನರಿ ಸೆಷನ್ನಲ್ಲಿ ಎನ್ಎಸ್ಜಿ ಸದಸ್ಯತ್ವಕ್ಕೆ ಭಾರತ ಹಾಕಿರುವ ಅರ್ಜಿಯನ್ನು ಪುರಸ್ಕರಿಸಿ, ಬೆಂಬಲಿಸ ಬೇಕು’ ಎಂದು ವೈಟ್ಹೌಸ್ ಪ್ರೆಸ್ ಸೆಕ್ರೆಟರಿ ಜೋಶ್ ಅರ್ನೆಸ್ಟ್ ತಿಳಿಸಿದ್ದಾರೆ.
ಅಮೆರಿಕಾ ಭಾರತದ ಸದಸ್ಯತ್ವವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದ ಸದಸ್ಯತ್ವ ಎನ್ಎಸ್ಜಿ ಸಭೆಯ ಅಜೆಂಡಾವಲ್ಲ ಎಂದು ಚೀನಾ ಹೇಳಿಕೆ ನೀಡಿದ ಬೆನ್ನಲ್ಲೇ ಅಮೆರಿಕಾದ ಈ ಹೇಳಿಕೆ ಹೊರ ಬಿದ್ದಿರುವುದು ವಿಶೇಷ.
ಮಂಗಳವಾರದಿಂದ ಸೆಯೋಲ್ನಲ್ಲಿ 48 ಸದಸ್ಯರುಳ್ಳ ಎನ್ಎಸ್ಜಿಯ ಪ್ಲೆನರಿ ಸಭೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.