ಬೆಳ್ತಂಗಡಿ: ವಿದ್ಯಾರ್ಥಿಗಳು ಮದ್ಯಪಾನ, ಡ್ರಗ್ಸ್ನಂತಹ ದುಶ್ಚಟಗಳಿಂದು ದೂರವಿರಲು ಧೃಢವಾಗದ ಸಂಕಲ್ಪಶಕ್ತಿ, ಆತ್ಮ ಚೈತನ್ಯವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಯೋಗ, ಧ್ಯಾನ ಸಹಕಾರಿ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಭಾನುವಾರ ಜೂ.21 ರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಿಗೆ ಹಾಗೂ ಸ್ವಯಂಸೇವಕರಿಗೆ ರಾಜೀವ ಗಾಂಧಿ ವಿವಿ ಸಂಯೋಜನೆಯಲ್ಲಿ 3 ದಿನಗಳ ಯೋಗ ಮತ್ತು ಜೀವನ ಶೈಲಿಯ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಯೋಗದಿಂದ ಆರೋಗ್ಯ, ಸಾಂಸಾರಿಕ ನೆಮ್ಮದಿಯನ್ನು ಗಳಿಸಿಕೊಳ್ಳಬಹುದು. ಯೋಗ ಹಾಗು ಪ್ರಕೃತಿಯೊಂದಿಗಿನ ಜೀವನದಿಂದ ನಮ್ಮನ್ನು ನಾವೇ ರೋಗಮುಕ್ತರನ್ನಾಗಿಸಿಕೊಳ್ಳಲು ಸಾಧ್ಯ . ಭಾರತೀಯ ಯೋಗವನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಸಂದರ್ಭ ನಮಗೆಲ್ಲರಿಗೂ ಬಂದಿರುವುದು ಪುಣ್ಯ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಗೂಗಲ್ ಇಂಡಿಯಾದ ಭಾರತದ ಮುಖ್ಯಸ್ಥ ಚೇತನ್ ಕೃಷ್ಣಸ್ವಾಮಿ ಅವರು, ಸಂಸ್ಕೃತವೂ ಸೇರಿದಂತೆ ದೇಶದ ಎಲ್ಲಾ ಭಾಷೆಗಳಲ್ಲಿ ಗೂಗಲ್ ಮೂಲಕ ಯೋಗ ವಿಜ್ಞಾನದ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ನಡೆಯುತ್ತಿದೆ. ತಂತ್ರಜ್ಞಾನದ ನಡಿಗೆ ಅದು ನಿರಂತರ ಮತ್ತು ತಡೆರಹಿತವಾಗಿದೆ. ತಾಂತ್ರಿಕತೆಯನ್ನು ದೇಶದ ಒಳಿತಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಇಂದು 400 ಮಿಲಿಯನ್ ಜನರು ಅಂತರ್ಜಾಲವನ್ನು ಉಪಯೋಗಿಸುತ್ತಿದ್ದಾರೆ. ತಿಂಗಳಿಗೆ 6 ಮಿಲಿಯನ್ ಜನರು ಸೇರ್ಪಡೆಗೊಳ್ಳುತ್ತಿದ್ದಾರೆ. ದೇಶದಲ್ಲಿ ೨೦೦ ಮಿಲಿಯನ್ ಜನರಲ್ಲಿ ಸ್ಮಾರ್ಟ್ಫೋನ್ಗಳಿವೆ. ಅಂತರ್ಜಾಲ, ಅಂಡ್ರಾಯ್ಡ ಸೆಲ್ ಫೋನ್ಗಳ ಬಳಕೆಯಲ್ಲಿ ನಾವು ಚೀನಾವನ್ನು ಹಿಂದಿಕ್ಕುವ ಧಾವಂತದಲ್ಲಿದ್ದೇವೆ ಎಂದ ಅವರು ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಜನರಿಗೆ ಏನು ಬೇಕು ಅದನ್ನು ಕೇಳದೇ ಕೊಡುವ ಸ್ಥಿತಿಗೆ ಕಂಪೆನಿಗಳು ಬರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎನ್ಎಸ್ಎಸ್ ಸಹಾಯಕ ರಿಜಿಸ್ಟಾರ್ ಹಾಗು ಯೋಜನಾ ಸಂಯೋಜಕ ಡಾ| ಬಿ. ವಸಂತ ಶೆಟ್ಟಿ, ಯೋಜನೆಯ ರಾಜ್ಯಾಧಿಕಾರಿ ಡಾ| ಗಣನಾಥ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ| ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಯೋಗ ವಿಭಾಗ ಡಾ| ಚಂದ್ರಕಾಂತ್ ಅವರು ಸಂಸ್ಥೆಯು ನಡೆಸಿದ ಯೋಗದ ವಿವಿಧ ಚಟುವಟಿಕೆಗಳನ್ನು ಪವರ್ಪಾಯಿಂಟ್ ಮೂಲಕ ವಿವರಿಸಿದರು.
3 ದಿನಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಕಾಲೇಜುಗಳಲ್ಲಿನ 500 ಕ್ಕೂ ಹೆಚ್ಚು ಎನ್ಎಸ್ಎಸ್ ಯೋಜನಾಧಿಕಾರಿಗಳು, ಸ್ವಯಂಸೇವಕರು ಭಾಗವಹಿಸುತ್ತಿದ್ದಾರೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದಿಂದ ಅಂತರಾಷ್ಟ್ರೀಯ ಯೋಗ ದಿನದ ಘೋಷಣೆಯಾಗಿದೆ. ಇದರಿಂದಾಗಿ ಯೋಗಕ್ಕೂ ಯೋಗ ಬಂದಿದೆ. ಹೀಗಾಗಿ ಭಾರತೀಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ – ಡಾ| ಹೆಗ್ಗಡೆ
ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವವರು ಯೋಗದ ಪ್ರತಿನಿಧಿಗಳಾಗಿ ಹೊರಬಂದು ಸಮಾಜಕ್ಕೆ ಪ್ರಯೋಜನ ಸಿಗುವಂತೆ ಪ್ರಯತ್ನಿಸಿಬೇಕು– ಚೇತನ್ ಕೃಷ್ಣಸ್ವಾಮಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.