ಪೇಶಾವರ: ಪಾಕಿಸ್ಥಾನದ ಖೈಬರ್-ಪಕ್ತುಂಕ್ವ ಪ್ರಾಂತ್ಯದ ಸರ್ಕಾರ ಬರೋಬ್ಬರಿ 300 ಮಿಲಿಯನ್ ಹಣವನ್ನು ’ಯೂನಿವರ್ಸಿಟಿ ಆಫ್ ಜಿಹಾದ್’ ಎಂದೇ ಪರಿಗಣಿತವಾದ ಮದರಸಾವೊಂದಕ್ಕೆ ದೇಣಿಗೆಯಾಗಿದೆ ನೀಡಿದೆ. ಈ ಮದರಸಾದ ಆಡಳಿತ ಮಂಡಳಿಯಲ್ಲಿ, ಹಳೆ ವಿದ್ಯಾರ್ಥಿಗಳಲ್ಲಿ ತಾಲಿಬಾನ್ ನಾಯಕರುಗಳೂ ಇದ್ದಾರೆ.
ದಾರೂಲ್ ಉಲಾಮ ಹಕ್ಕಾನಿಯಾ ನೌಶೆರಾ ಮದರಸಕ್ಕೆ 300 ಮಿಲಿಯನ್ ನೀಡಲಾಗಿದೆ. ಅದರ ವಾರ್ಷಿಕ ಖರ್ಚುವೆಚ್ಚಗಳ ನಿರ್ವಹಣೆಗೆ ಈ ಹಣ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.
ಖೈಬರ್-ಪಕ್ತುಂಕ್ವ ಪ್ರಾಂತ್ಯದಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ತಾರೀಖ್ ಇ ಇನ್ಸಾಫ್ ಪಕ್ಷ ಸರ್ಕಾರದಲ್ಲಿದೆ. ಜಿಹಾದಿಗಳನ್ನು ತಯಾರಿಸುವ ಮದರಸಾಕ್ಕೆ ಹಣಕಾಸು ನೀಡುವ ಮೂಲಕ ಈ ಸರ್ಕಾರ ಪರೋಕ್ಷವಾಗಿ ಉಗ್ರರಿಗೆ ಬೆಂಬಲವನ್ನು ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.