ಲಂಡನ್: ಲಂಡನ್ನಿನ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿನಿ ವಿನ್ಯಾಸಗೊಳಿಸಿರುವ ಸ್ಪೋರ್ಟ್ ಎಲ್ಇಡಿ ‘ಎಮೋಜಿ’ ಹ್ಯಾಂಡ್ಬ್ಯಾಗ್ಗಳು ಯುಕೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.
ನಾಸಿಕ್ ಮೂಲದ ಫ್ಯಾಷನ್ ಡಿಸೈನರ್ ಮಧುರಾ ಕುಲಕರ್ಣಿ ಯುನಿವರ್ಸಿಟಿಯಲ್ಲಿ ನಡೆದ ಫೆಸ್ಟಿವಲ್ ಭಾಗವಾಗಿ ಈ ಕೈಚೀಲಗಳನ್ನು ವಿನ್ಯಾಸಗೊಳಿಸಿದ್ದಾರೆ. ಇಂದಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ ನೇರ ಸಂವಹನದ ಕೊರತೆಗೆ ಕಾರಣವಾಗಿವೆ. ನೇರ ಸಂವಹನ ನಶಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಬ್ಬರ ನಡುವಿನ ಮೌಖಿಕ ಮಾತುಕತೆ ಈ ಕೈಚೀಲ ವಿನ್ಯಾಸದ ಪರಿಕಲ್ಪನೆಯಾಗಿದೆ. ಎರಡು ಜನರ ಕೈಚೀಲಗಳು ಒಂದೇ ಎಮೋಜಿ ತೋರಿಸುತ್ತಿದ್ದರೆ ಈ ಎರಡು ಎಲ್ಇಡಿ ಎಮೋಜಿಗಳು ಸಂಭಾಷಣೆ ಆರಂಭಿಸಬಹುದು ಎಂದು ಮಧುರಾ ಹೇಳಿದ್ದಾರೆ.
ಇಂದಿನ 21 ನೇ ಶತಮಾನದ ತಂತ್ರಜ್ಞಾನ ಯುಗದಲ್ಲಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿದ್ದು, ಇತರರೊಂದಿಗೆ ಮೌಖಿಕ ಸಂಭಷಣೆ ತೀರಾ ಕಡಿಮೆಯಾಗಿದೆ. ನನ್ನ ಈ ಪರಿಕಲ್ಪನೆ ವಿಶ್ವದಲ್ಲಿ ಒಂದು ಕ್ರಾಂತಿಯನ್ನುಂಟು ಮಾಡಬಹುದು ಎಂದು 2016ರ ನ್ಯೂಯಾರ್ಕ್ ಇಂಡಿಪೆಂಡೆಂಟ್ ಹ್ಯಾಂಡ್ಬ್ಯಾಗ್ ಅವಾರ್ಡ್ಸ್ ಫೈನಲಿಸ್ಟ್ ಆಗಿರುವ ಮಧುರಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.