ಮುಂಬಯಿ: ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರು ತಾನು ಎರಡನೇ ಬಾರಿಗೆ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದರೂ ಆರಂಭಿಕ ವಹಿವಾಟಿನ ನಷ್ಟದಿಂದ ಷೇರು ಮಾರುಕಟ್ಟೆ ಪಾರಾಗಿದೆ.
ಉತ್ತಮ ಮಳೆಯ ನಿರೀಕ್ಷೆ ಮತ್ತು ಜಿಡಿಪಿ ಪ್ರಗತಿಯ ಹಿನ್ನಲೆಯಲ್ಲಿ ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಭರವಸೆ ಇರಿಸಿರುವ ಷೇರು ಮಾರುಕಟ್ಟೆ ರಾಜನ್ ನಿರ್ಧರದಿಮದ ವಿಚಲಿತಗೊಂಡಿಲ್ಲ ಎಂಬುದು ವಿಶೇಷ.
ಸೆನ್ಸೆಕ್ಸ್ ಆರಂಭಿಕ ನಷ್ಟವನ್ನು ಸರಿದೂಗಿಸಿದ್ದು, 74 ಅಂಕ ಗಳಿಸಿ, 26,699ರಲ್ಲಿ ಟ್ರೇಡಿಂಗ್ ಮಾಡುತ್ತಿದೆ, ನಿಫ್ಟಿ 19 ಪಾಯಿಂಟ್ ಪಡೆದು, 8189ರಲ್ಲಿ ವಹಿವಾಟು ನಡೆಸುತ್ತಿದೆ.
ಬಂಡವಾಳದಾರರು ಮತ್ತು ಎಫ್ಐಐಗಳು ಭಾರತದ ಆರ್ಥಿಕ ಪ್ರಗತಿಯ ಮೇಲೆ ಸ್ಥಿರ ನಂಬಿಕೆ ಇರಿಸಿದ್ದಾರೆ ಮತ್ತು ಮಾನ್ಸೂನ್ ಮೇಲೆ ಭರವಸೆ ಇರಿಸಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ.
ರಾಜನ್ ನಿಗರ್ಮನ ಷೇರುಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.