ನವದೆಹಲಿ: ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಹಿನ್ನಲೆಯಲ್ಲಿ ಖ್ಯಾತ ಯೋಗಗುರು ರಾಮ್ದೇವ್ ಬಾಬಾ ಅವರು ಭಾನುವಾರ ಐತಿಹಾಸಿಕ ರಾಜ್ಪಥ್ನಲ್ಲಿ ಯೋಗ ಶಿಬಿರ ಆರಂಭಿಸಿದ್ದಾರೆ.
ಸುಮಾರು 35 ಸಾವಿರ ಯೋಗ ಅಭ್ಯಾಸದಾರರು ಈ ರಿಹರ್ಸಲ್ನಲ್ಲಿ ಭಾಗವಹಿಸಿದ್ದು, ಎರಡನೇ ಅಂತಾರಾಷ್ಟ್ರೀಯ ಯೋಗದಿನದಂದು ಇವರೆಲ್ಲಾ ಯೋಗ ಪ್ರದರ್ಶನ ನೀಡಲಿದ್ದಾರೆ.
ಕೇಂದ್ರ ನಗರಾಭಿವೃದ್ಧಿ ಸಚಿವರಾದ ವೆಂಕಯ್ಯ ನಾಯ್ಡು ಈ ರಿಹರ್ಸಲ್ ಶಿಬಿರಕ್ಕೆ ಚಾಲನೆ ನೀಡಿದ್ದರು. ಸಚಿವರಾದ ಬಾಬುಲ್ ಸುಪ್ರಿಯೋ, ಮೀನಾಕ್ಷಿ ಲೇಖಿ, ಮನೋಜ್ ತಿವಾರಿ, ವಿಜಯ್ ಗೋಯಲ್ ಭಾಗವಹಿಸಿದ್ದರು.
ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮವೂ ಜರುಗಿತು. ಕೈಲಾಸ್ ಖೇರ್ ಅವರ ಸಂಗೀತ ಸಮಾರಂಭಕ್ಕೆ ಮೆರುಗು ತುಂಬಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.