ಕೊಚ್ಚಿನ್ : ಇದುವರೆಗೆ ಶಿಕ್ಷಕರು ವಿದ್ಯಾರ್ಥಿಗಳ ಸಾಧನೆಯ ಮೌಲ್ಯಮಾಪನ ಮಾಡುವುದನ್ನು ನೋಡುತ್ತಾ ಬಂದಿದ್ದೇವೆ. ಆದರೆ ಇದೀಗ ಶಿಕ್ಷಕರ ಕಾರ್ಯ ಕ್ಷಮತೆಯ ವಿಶ್ಲೇಷಣೆ ಬಗ್ಗೆ ವಿದ್ಯಾರ್ಥಿಗಳು ಮೌಲ್ಯಮಾಪನ ಮಾಡುವ ಕಾಲ ಬಂದಿದೆ!
ಕೊಚ್ಚಿನ್ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಸೆಮಿಸ್ಟರ್ನ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಶೈಕ್ಷಣಿಕ ಪ್ರದರ್ಶನದ ಬಗ್ಗೆ ಮೌಲ್ಯಮಾಪನ ಮಾಡುವ ಹಕ್ಕನ್ನು ನೀಡಿದೆ. ಟೀಚಿಂಗ್ ಮತ್ತು ನಾನ್ ಟೀಚಿಂಗ್ ಸ್ಟಾಪ್ಗಳ ಮೌಲ್ಯಮಾಪನದ ಆಡಿಟ್ನ್ನು ಮಾಡುವ ಅವಕಾಶವನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ತರಗತಿಯಲ್ಲಿ ಶಿಕ್ಷಕರ ಪ್ರದರ್ಶನ, ರೆಗ್ಯುಲರ್ ಆಗಿ ಬರುತ್ತಾರೆಯೇ, ಟೈಮ್ಗೆ ಸರಿಯಾಗಿ ಸಿಲೆಬಸ್ ಪೂರ್ಣಗೊಳಿಸಿದ್ದಾರೆಯೇ, ಟೀಚಿಂಗ್ ವೇಳೆಯಲ್ಲಿ ಕಮ್ಯೂನಿಕೇಶನ್, ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುತ್ತಾರೆಯೇ, ಉತ್ತರಪತ್ರಿಕೆ ತಿದ್ದುಪಡಿಯಲ್ಲಿ ನ್ಯಾಯಸಮ್ಮತತೆ ಹೀಗೆ ಎಲ್ಲವನ್ನೂ ಗಮನಿಸಿ ಶಿಕ್ಷಕರಿಗೆ ವಿದ್ಯಾರ್ಥಿಗಳು ಅಂಕಗಳನ್ನು ನೀಡಲಿದ್ದಾರೆ.
ಈ ಮೂಲಕ ಶಿಕ್ಷಕರ ಶೈಕ್ಷಣಿಕ ಸಾಧನೆಗೆ ಶೇ. 30ರಷ್ಟು ಅಂಕ ವಿದ್ಯಾರ್ಥಿಗಳ ಪರಿಶೀಲನೆಯಿಂದ ದೊರೆಯಲಿದೆ. ಶೇ.30 ರಷ್ಟು ಸಂಶೋಧನಾ ಕೊಡುಗೆಯಿಂದ, ಶೇ.30ರಷ್ಟು ಅಂತಾರಾಷ್ಟ್ರೀಯ ಯೋಜನೆ ಮತ್ತು ಅನುದಾನ, ಶೇ.10ರಷ್ಟು ಇನ್ನೋವೇಶನ್ಗೆ ದೊರೆಯಲಿದೆ.
ಪ್ರತಿ ಶಿಕ್ಷಕರದ್ದೂ ಒಂದೊಂದು ರೀತಿಯ ಬೋಧನೆ ಶೈಲಿಯಾಗಿರುತ್ತದೆ. ಕೆಲವರು ವಿಚಾರಗೋಷ್ಠಿಗಳನ್ನು ನಡೆಸಿದರೆ, ಇನ್ನು ಕೆಲವರು ಉಪನ್ಯಾಸಗಳು ನೀಡಬಹುದು. ಕೆಲವೇ ಕೆಲವರು ಪ್ರಶ್ನೋತ್ತರ ಅವಧಿಯನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ವಿಷಯವನ್ನು ತಿಳಿಯಪಡಿಸುತ್ತಾರೆ. ಶಿಕ್ಷಕರ ಮೌಲ್ಯಮಾಪನ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳು ತಮಗೆ ಸರಿಹೊಂದುವಂತಹ ಬೋಧನಾ ಶೈಲಿ ಅಥವಾ ಶಿಕ್ಷಕರು ಯಾವ ರೀತಿ ಇದನ್ನು ಬದಲಾಯಿಸಿಕೊಳ್ಳಬಹುದು ಎಂಬುದಲ್ಲದೆ, ಇದು ಕಾರ್ಯಗಳ ಬಗ್ಗೆ ಬದ್ಧತೆಯನ್ನು ವೃದ್ಧಿಸಿಕೊಳ್ಳಲೂ ಅನುಕೂಲ ಎಂದು ಕುಸಾಟ್ಸ್ ನ ಎಸ್ಎಫ್ಐ ಘಟಕದ ಕಾರ್ಯದರ್ಶಿ ಶ್ರೀಜೇಶ್ ಬೋನ್ಜ್ಲೆ ಹೇಳಿದರು.
ಯುಜಿಸಿಯು ಕೊಚ್ಚಿನ್ ವಿಶ್ವವಿದ್ಯಾಲಯದ ಈ ಕಾರ್ಯವನ್ನು ಪರಿಶೀಲಿಸಿ ದೇಶದಾದ್ಯಂತ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಆದರೆ ಇದಕ್ಕೆ ಶಿಕ್ಷಕರ ವಿರೋಧವೂ ಎದುರಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.