ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ವ್ಯಕ್ತಿಯನ್ನು ಯುಎಸ್ನ ಮಲೇಷ್ಯಾದ ಅಮೇರಿಕಾ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ.
ಮಲೇಷ್ಯಾದ ಹಾಲಿ ರಾಯಭಾರಿ ಜೋಸೆಫ್ ವೈ. ಯುನ್ ಅವರ ಜಾಗಕ್ಕೆ ಕಮಲಾ ಶಿರಿನ್ ಲಕ್ಧಿರ್ ಅವರ ನೇಮಕವನ್ನು ಅಮೇರಿಕಾ ಸೆನೆಟ್ ಖಚಿತಪಡಿಸಿದೆ.
ಲಕ್ಧಿರ್ ಅವರು ಫಾರಿನ್ ಸರ್ವೀಸ್ ಕ್ಲಾಸ್ ಆಫ್ ಕೌನ್ಸಿಲರ್ನಲ್ಲಿ ಕರಿಯರ್ ಸದಸ್ಯೆಯಾಗಿದ್ದು, ರಾಜಕೀಯ ವ್ಯವಹಾರಗಳ ಸ್ಪೆಷಲ್ ಅಸಿಸ್ಟೆಂಟ್ ಆಗಿ 2005 ರಿಂದ 2006 ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಹಲವಾರು ಉನ್ನತ ಹುದ್ದೆಗಳನ್ನು ನಿಭಾಯಿಸಿದ ಅನುಭವ ಅವರಿಗಿದೆ.
ಈ ಅನುಭವ ಮತ್ತು ಅವರ ಶ್ರಮ ಅಮೇರಿಕಾದಲ್ಲಿನ ಸವಾಲುಗಳನ್ನು ನಿಯಂತ್ರಿಸಲು ಹಾಗೂ ಎದುರಿಸಲು ಅವರಿಗೆ ಶಕ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ. ಅವರ ಸೇವೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಒಬಾಮ ಹೇಳಿದ್ದಾರೆ.
ಲಕ್ಧಿರ್ ಹಾರ್ವರ್ಡ್ ಕಾಲೇಜಿನಿಂದ ಬಿಎ, ನ್ಯಾಷನಲ್ ವಾರ್ ಕಾಲೇಜಿನಿಂದ ಎಂ.ಎಸ್ ಪದವಿ ಪಡೆದುಕೊಂಡಿದ್ದಾರೆ.
ಲಕ್ಧಿರ್ ತಂದೆ ನೂರ್ ಲಕ್ಧಿರ್ 1920 ರಲ್ಲಿ ಮುಂಬೈಯಲ್ಲಿ ಜನಿಸಿದ್ದರು. ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಿಂದ ಸ್ಕಾಲರ್ಶಿಪ್ ಪಡೆದು ನಂತರ ನ್ಯೂಯಾರ್ಕ್ ಸಿಟಿಗೆ ತೆರಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.