ವಾಷಿಂಗ್ಟನ್ : ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ದೊರೆಯಲು ಎಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಬೇಕೆಂದು ಇತರ 48 ಸದಸ್ಯ ರಾಷ್ಟ್ರಗಳಿಗೆ ಅಮೇರಿಕಾ ಕೋರಿದೆ.
ಪರಮಾಣು ಇಂಧನ ಪೂರೈಕೆದಾರರ ಸಮೂಹಕ್ಕೆ ಭಾರತದ ಸದಸ್ಯತ್ವವನ್ನು ಕೋರಿ ಮುಂದಿನ ವಾರ ಎನ್ಎಸ್ಜಿ ಪ್ರಧಾನ ಸಭೆ ನಡೆಯಲಿದ್ದು, ಆಗ ಭಾರತದ ಸದಸ್ಯತ್ವ ಕೋರಿರುವ ಅರ್ಜಿಯನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಪರಿಗಣಿಸಬೇಕೆಂದು ಅಮೇರಿಕಾ ಕೋರಿದೆ.
ಇತ್ತೀಚೆಗಷ್ಟೇ ಮೋದಿ ಅಮೇರಿಕಾ ಭೇಟಿ ನೀಡಿದ್ದಾಗಲೂ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವುದಾಗಿ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದರು.
ಮುಂದಿನ ವಾರದಲ್ಲಿ ಎನ್ಎಸ್ ಜಿ ಸರ್ವ ಸದಸ್ಯರ ಸಭೆಯ ನಡೆಯಲಿದ್ದು, ಈ ಸಮಯದಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ ಕೋರಿ ಅಮೇರಿಕಾ ಸದಸ್ಯ ರಾಷ್ಟ್ರಗಳಿಗೆ ಪತ್ರ ಬರೆದಿದೆ.
ಭಾರತದ ಸದಸ್ಯತ್ವವನ್ನು ವಿರೋಧಿಸುತ್ತಿರುವ ಚೀನಾ ಮಾತ್ರ ಭಾರತವು ಅಣ್ವಸ್ತ್ರ ಪ್ರಸರಣ ನಿಷೇಧದ ಷರತ್ತುಗಳನ್ನು ಒಪ್ಪಿದರೆ ಮಾತ್ರ ಸದಸ್ಯತ್ವವನ್ನು ಬೆಂಬಲಿಸಲಿದೆ ಎಂದು ಹೇಳಿಕೆ ನೀಡಿತ್ತು. ಚೀನಾ ವಿರೋಧದ ನಡುವೆಯೂ ಅಮೇರಿಕಾ ಭಾರತದ ಸದಸ್ಯತ್ವವನ್ನು ಎಲ್ಲರೂ ಬೆಂಬಲಿಸಬೇಕೆಂದು 48 ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.