ನವದೆಹಲಿ: ದೇಶದಾದ್ಯಂತ ಹಿರಿಯ ನಾಗರಿಕರಿಗಾಗಿ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸೇವೆ, ಆಸ್ಪತ್ರೆಗಳು, ವೃದ್ಧಾಲಯಗಳನ್ನು ಸಂಪರ್ಕಿಸುವ ಭದ್ರತಾ ಆ್ಯಪ್ನ್ನು ಆರಂಭಿಸಿದೆ.
ಹೆಲ್ಪ್ಏಜ್ ಎಸ್ಒಎಸ್’ ಆಪ್ನ್ನು ಹರ್ಯಾಣ ರಾಜ್ಯದ ಪಂಚಕುಲದಲ್ಲಿ ಪೊಲೀಸ್ ಮಹಾ ನಿರ್ದೇಶಕ ಕೆ.ಪಿ.ಸಿಂಗ್ ಬಿಡಗಡೆಗೊಳಿಸಿರುವುದಾಗಿ ಹರ್ಯಾಣ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಒಎಸ್ ಅಂದರೆ ’ಸೇವ್ ಅವರ್ ಸೀನಿಯರ್ಸ್’ (ನಮ್ಮ ಹಿರಿಯರನ್ನು ಉಳಿಸಿ) ಎಂಬುದಾಗಿದೆ. ಈ ಆ್ಯಪ್ ಭಾರತದಾದ್ಯಂತ ಬಳಕೆದಾರರನ್ನು ಸ್ಥಳೀಯ ಹೆಲ್ಪ್ಏಜ್ ಸಹಾಯವಾಣಿಗಳಿಗೆ ಸಂಪರ್ಕಿಸುತ್ತದೆ. ಎಸ್ಒಎಸ್ ಅಪ್ಲಿಕೇಷನ್ ಮೂಲಕ ಕರೆ ಮಾಡಿದಲ್ಲಿ ಹೆಲ್ಪ್ಏಜ್ ಸಹಾಯವಾಣಿ ಸಿಬ್ಬಂದಿ ಅಥವಾ ಸಲಹೇಗಾರರು ಕರೆ ಸ್ವೀಕರಿಸಿ ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸ್, ಆಸ್ಪತ್ರೆ ಅಥವಾ ವೃದ್ಧಾಲಯಗಳಿಗೆ ಸಂಪರ್ಕಿಸುತ್ತದೆ ಎಂದು ಅದು ತಿಳಿಸಿದೆ.
ಹೆಲ್ಪ್ಏಜ್ ಇಂಡಿಯಾದ 24×7 ಸೇವೆ ತೊಂದರೆಗೆ ಸಿಲುಕಿರುವ ಹಿರಿಯ ನಾಗರಿಕರಿಗೆ ಸಹಾಯ ಒದಗಿಸುವ ಗುರಿ ಹೊಂದಿದೆ.
ಈ ಆ್ಯಪ್ ಸದ್ಯ ಆಂಡ್ರಾಯ್ಡ್ ಫೋನ್ಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತುದ್ದು, ಇತರ ಫೋನ್ಗಳಲ್ಲೂ ಕಾರ್ಯ ನಿರ್ವಹಿಸುವಂತೆ ರೂಪಿಸಲಾಗುವುದು ಎಂದು ಹೆಲ್ಪ್ಏಜ್ ಇಂಡಿಯಾ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.