ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯೊಂದಿಗೆ ಮುಂದಿನ 5 ವರ್ಷಗಳಲ್ಲಿ ಉತ್ಪಾದನೆ ಮತ್ತು ಮೂಲಸೌಕರ್ಯ ಪ್ರಾಜೆಕ್ಟ್ಗಳಲ್ಲಿ ಸುಮಾರು 87 ಬಿಲಿಯನ್ ಡಾಲರ್ ಹೂಡಿಕೆ ಮಾಡಿಲು ನಿರ್ಧರಿಸಿದೆ. ಇದು ದೇಶದ ಉಕ್ಕು ಮತ್ತು ಗಣಿಗಾರಿಕೆ ಕಂಪೆನಿಗಳಿಗೆ ಲಾಭದಾಯಕವಾಗಲಿದೆ ಎಂದು ವರದಿ ತಿಳಿಸಿದೆ. ಕಳೆದ 18 ತಿಂಗಳಲ್ಲೇ ಉಕ್ಕಿನ ಉತ್ಪಾದನೆಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಎಸ್&ಪಿ ಗ್ಲೋಬಲ್ ಪ್ಲ್ಯಾಟ್ಸ್ ಸಂಶೋಧನೆಯ ವರದಿ ತಿಳಿಸಿದೆ.
ಕೇಂದ್ರ ಸರ್ಕಾರದಿಂದ ಮುಂದಿನ 5 ವರ್ಷಗಳಿಗೆ ರಸ್ತೆ, ರೈಲು ಹಾಗೂ ವಿದ್ಯುತ್ಗೆ ಒಟ್ಟು ಹೂಡಿಕೆಯ ಶೇ. 6೦ ರಷ್ಟು ಮೀಸಲಿಡಲಾಗಿದೆ. ಸರ್ಕಾರ 2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ 10,000 ಕಿ.ಮೀ. ಹೆದ್ದಾರಿ ನಿರ್ಮಿಸಲು ಉದ್ದೇಶಿಸಿದೆ.
ರಸ್ತೆ ನಿರ್ಮಾಣಕ್ಕೆ ರೆಬಾರ್ ಮತ್ತು ವೈರ್ ರಾಡ್ಗಳು ಶೇ. 8.5ರಷ್ಟು ಹೆಚ್ಚಳದೊಂದಿಗೆ 30.14 ಮಿಲಿಯನ್ ಟನ್ ಬಳಕೆಯಾಗಿದ್ದು, ಎಪ್ರಿಲ್ 2015ರಿಂದ ಫೆ.2016ರ ವರೆಗೆ ಸ್ಟೀಲ್ ಉತ್ಪಾದಕರು ಲಾಭ ಪಡೆದಿವೆ. ರೈಲ್ವೆ ಇಲಾಖೆ ಮುಂದಿನ 5 ವರ್ಷಗಳಲ್ಲಿ ರೈಲು ಸಂಪರ್ಕ ಕಾಮಗಾರಿಗೆ 128 ಬಿಲಿಯನ್ ಡಾಲರ್ ವ್ಯಯ ಮಾಡಲಿದ್ದು, 2017ರ ಆರ್ಥಿಕ ವರ್ಷದಲ್ಲಿ 17.6 ಬಿಲಿಯನ್ ವ್ಯಯಿಸಲಿದೆ ಎಂದು ಜಾಯಿಂಟ್ ಪ್ಲಾಂಟ್ ಕಮಿಟಿ ವರದಿ ತಿಳಿಸಿದೆ.
ರೈಲ್ವೆ ಹಳಿ ಮತ್ತು ಸಂಪರ್ಕ ನಿರ್ಮಾಣ ಕಾಮಗಾರಿ 2017ರಲ್ಲಿ ದಿನಕ್ಕೆ 7 ಕಿ.ಮೀ.ನಿಂದ 2018ರಲ್ಲಿ ದಿನಕ್ಕೆ 13 ಕಿ.ಮೀ. ಕಾಮಗಾರಿ ಮಾಡಲಾಗುವುದು. ರೈಲ್ವೆ ಸಂಪರ್ಕಕ್ಕೆ ಮುಂದಿನ 3 ವರ್ಷಗಳಲ್ಲಿ 6,44,000 ಟನ್ಗಳಷ್ಟು ಉಕ್ಕು ಅಗತ್ಯವಿದ್ದು, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಗಣನೀಯವಾಗಿ ಲಾಭ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.