ಬೀಜಿಂಗ್ : ಭಾರತ ಪರಮಾಣು ಪೂರೈಕ ಗುಂಪಿನ ಸದಸ್ಯತ್ವ ಪಡೆಯುವ ಸನಿಹದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಚೀನಾ ಇದೀಗ ಹೊಸ ರಾಗ ಎಳೆದಿದೆ.
ಒಂದು ವೇಳೆ ಭಾರತವನ್ನು ಎನ್ಎಸ್ಜಿಗೆ ಸೇರಿಸಿಕೊಂಡರೆ ಭಾರತ-ಪಾಕ್ ನಡುವಣ ಪರಮಾಣು ಸಮತೋಲನ ಮುರಿಯಲಿದೆ ಎಂದು ಚೀನಾ ಅಧಿಕಾರಿಗಳು ಸರ್ಕಾರಿ ಸ್ವೌಮ್ಯದ ಚೀನಾ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಮಾತ್ರವಲ್ಲದೆ ಎನ್ಎಸ್ಜಿಗೆ ಭಾರತ ಪ್ರವೇಶಿಸುವುದರಿಂದ ದಕ್ಷಿಣ ಏಷ್ಯಾದ ತಂತ್ರಗಾರಿಕಾ ಸಮತೋಲನ ನಡುಗಲಿದೆ. ಏಷ್ಯಾ ಪೆಸಿಫಿಕ್ ರೀಜನ್ನ ಶಾಂತಿ ಸ್ಥಿರತೆಗೆ ಮೋಡ ಕವಿಯಲಿದೆ ಎಂದಿದ್ದಾರೆ.
ನ್ಯಾಯಯುತ ಮತ್ತು ತತ್ವಗಳ ನಿಯಮದಂತೆ ನಡೆದುಕೊಂಡರೆ ಮಾತ್ರ ಚೀನಾ ಭಾರತವನ್ನು ಬೆಂಬಲಿಸಲಿದೆ ಎಂದು ಗ್ಲೋಬಲ್ ಟೈಮ್ಸ್ ಮೀಡಿಯಾದ ಲೇಖನವೊಂದರಲ್ಲಿ ತಿಳಿಸಲಾಗಿದೆ.
ಈ ಲೇಖನ ಭಾರತದ ಎನ್ಎಸ್ಜಿ ಸದಸ್ಯತ್ವ ಪಡೆಯುವುದಕ್ಕೆ ಚೀನಾದ ಪ್ರಬಲ ವಿರೋಧವನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಅಲ್ಲದೆ ಭಾರತ ಸದಸ್ಯತ್ವ ಪಡೆಯುವುದರಿಂದ ತನ್ನ ಮಿತ್ರ ಪಾಕಿಸ್ಥಾನ ಹಿಂದೆ ಬೀಳುತ್ತದೆ ಎಂಬ ಆತಂಕ ಅದಕ್ಕಿದೆ ಎಂಬುದನ್ನೂ ತೋರಿಸುತ್ತದೆ.
ಪ್ರಧಾನಿ ಮೋದಿ ಪ್ರಯತ್ನದಿಂದ ಮೆಕ್ಸಿಕೋ, ಅಮೇರಿಕಾ, ಸ್ವಿಸ್, ಸೇರಿದಂತೆ ಹಲವಾರು ರಾಷ್ಟ್ರಗಳು ಭಾರತದ ಎನ್ಎಸ್ಜಿ ಬಿಡ್ಗೆ ಬೆಂಬಲ ಸೂಚಿಸಿದೆ. ಇದು ಸಹಜವಾಗಿಯೇ ಚೀನಾ ಮತ್ತು ಅದರ ಮಿತ್ರ ಪಾಕಿಸ್ಥಾನದ ಅಂತಕಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.