ರಾಜಸ್ಥಾನ : ರಾಜಸ್ಥಾನದ ಅಕೋಲಾ ನಗರದಲ್ಲಿ ಟೈಲರ್ಗಳು ಮಧ್ಯಾಹ್ನದ ಉರಿ ಬಿಸಿಲಿನಲ್ಲೂ ನೆರಳಿನ ಜಾಗದಲ್ಲಿ ಕುಳಿತು ಆರ್ಎಸ್ಎಸ್ನ ನೂತನ ಸಮವಸ್ತ್ರದ ಹೊಲಿಗೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
40 ಸ್ವಯಂಸೇವಕರು ಖಾಕಿ ಬಟ್ಟೆಯನ್ನು 10 ಸಾವಿರ ಪ್ಯಾಂಟ್ಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜುಲೈ ಮಧ್ಯಭಾಗದಲ್ಲಿ ಪ್ಯಾಂಟ್ಗಳು ಸಿದ್ಧವಾಗಲಿದೆ ಎನ್ನಲಾಗಿದೆ.
ಜಯಪ್ರಕಾಶ್ ನೇತೃತ್ವದ ಟೈಲರ್ಗಳ ತಂಡಕ್ಕೆ ಆರ್ಎಸ್ಎಸ್ ಸಮವಸ್ತ್ರ ಹೊಲಿಯುವುದು ಬರಿ ಉದ್ಯಮವಲ್ಲ. ಅದು ಪ್ರೀತಿಯ ಕಾಯಕವಾಗಿದೆ. ತಮ್ಮ ಗ್ರಾಹಕರು ಆರ್ಎಸ್ಎಸ್ನವರು ಎಂಬ ಪ್ರೀತಿ ಗೌರವ ಅವರದ್ದಾಗಿದೆ.
ಜಯಪ್ರಕಾಶ್ ಕುಟುಂಬ ಹಿಂದು ರಾಷ್ಟ್ರವಾದಿ ಸಂಘಟನೆಯ ಸಮವಸ್ತ್ರಗಳನ್ನು ಹಲವಾರು ವರ್ಷಗಳಿಂದ ಹೊಲಿಯುತ್ತಿದೆ. ವರ್ಷಕ್ಕೆ ೫೦ ಸಾವಿರ ಆರ್ಡರ್ ಇವರಿಗೆ ಸಿಗುತ್ತದೆ.
ಆರ್ಎಸ್ಎಸ್ನ ಟ್ರೇಡ್ ಮಾರ್ಕ್ ಆಗಿದ್ದ ಖಾಕಿ ನಿಕ್ಕರ್ಗಳನ್ನು ಇದೀಗ ಪ್ಯಾಂಟ್ಗಳು ಬದಲಾಯಿಸಿವೆ. ಅಕ್ಟೋಬರ್ನಿಂದ ಆರ್ಎಸ್ಎಸ್ ನೂತನ ಸಮವಸ್ತ್ರವನ್ನು ಪಡೆಯಲಿದ್ದು ಈ ಕುರಿತ ನಿರ್ಧಾರವನ್ನು ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಮಾಡಲಾಗಿತ್ತು. ಪ್ಯಾಂಟ್ ಹೊರತುಪಡಿಸಿ ಆರ್ಎಸ್ಎಸ್ ಸಮವಸ್ತ್ರದಲ್ಲಿ ಯಾವುದೇ ಬದಲಾವಣೆಯೂ ಆಗಿಲ್ಲ.
ಟೈಟಾನ್ ಪ್ರೋಸೆಸ್ ಹೌಸ್ ಬಿಳಿ ಬಟ್ಟೆಗಳನ್ನು ಬಿಲ್ವಾರ ನಗರದ ನೇಕಾರರಿಂದ ತರಿಸಿ ಅದಕ್ಕೆ ಡಾರ್ಕ್ ಖಾಕಿಯ ಡೈ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. 7 ಲಕ್ಷ ಮೀಟರ್ ಪ್ರೋಸೆಸ್ ಮಾಡಿದ ಬಟ್ಟೆಯನ್ನು ಪ್ಯಾಂಟ್ಗಾಗಿ ಸರಬರಾಜು ಮಾಡುತ್ತಿದೆ.
ಯೋಗ ಮತ್ತು ಸೂರ್ಯ ನಮಸ್ಕಾರ ಮಾಡಲು ಅನುಕೂಲವಾಗುವಂತೆ ಪ್ಯಾಂಟ್ಗಳನ್ನು ಹೊಲಿಯಲಾಗುತ್ತಿದೆ.
ಇದು ನಮಗೆ ಉದ್ಯಮವಲ್ಲ. ಒಂದು ಸಿದ್ಧಾಂತ ಎನ್ನಲು ಜಯಪ್ರಕಾಶ್ ಮರೆಯುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.