ನವದೆಹಲಿ: ಸಾರಿಗೆಗೆ ಸಂಬಂಧಿಸಿದ ಜನಪ್ರಿಯ ಮೊಬೈಲ್ ಆ್ಯಪ್ ಓಲಾ ಶೇರ್ ಜೂನ್ 5 ರಂದು ಗುರುಗ್ರಾಮ್ನ ವಿವಿಧ ಪ್ರದೇಶಗಳಲ್ಲಿ 10,000 ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದೆ. ಇದು ವಾಹನಗಳ ಹೊಗೆ ಹೊರಸೂಸುವಿಕೆ ನಿಯಂತ್ರಣದ ಒಂದು ಭಾಗವಾಗಿದೆ.
ಮಾಲಿನ್ಯ ಮುಕ್ತ, ಸ್ವಚ್ಛ, ಹಸಿರು ಪರಿಸರ ಉಳಿಸುವಲ್ಲಿ ಕಾರ್ಯ ನಿರ್ವಹಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಓಲಾ ಮುಂತಾದ ಕಾರ್ಪೋರೇಟ್ ಕಂಪೆನಿಗಳ ಈ ಕ್ರಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯೊಂದಿಗೆ ಜಾಗೃತಿ ಮೂಡಿಸಲು ಹೆಚ್ಚು ಸಹಕಾರಿಯಾಗಲಿದೆ ಎಂದು ಗುರುಗ್ರಾಮ್ ಪುರಸಭೆ ಜಿಲ್ಲಾಧಿಕಾರಿ ಟಿ.ಎಲ್. ಸತ್ಯಪ್ರಕಾಶ್ ಹೇಳಿದ್ದಾರೆ.
ಓಲಾ ಶಟಲ್ ಕೂಡ ಪರಿಸರ ಸ್ನೇಹಿ ಯೋಜನೆಗೆ ಉತ್ತಮ ಕಾರ್ಯ ನಿರ್ವಹಿಸಿದೆ. ಓಲಾ ಶೇರ್ ಹಾಗೂ ಓಲಾ ಶಟಲ್ ದೆಹಲಿ ಎನ್ಸಿಆರ್ನಲ್ಲಿ 26.74 ಲಕ್ಷ ವಾಹನಗಳನ್ನು ರಸ್ತೆಗಳಿಂದ ದೂರವಿಡಲು ನೆರವಾಗಿವೆ. ಓಲಾ ಶೇರ್ ಮೂಲಕ ಜನರು ಟ್ಯಾಕ್ಸಿಗಳ ಪ್ರಯಾಣವನ್ನು ಹಂಚಿಕೊಳ್ಳುತ್ತಿದ್ದು, ವಾಹನಗಳಷ್ಟೇ ಅಲ್ಲದೇ 52.7 ಲಕ್ಷ ಕಿಲೋ ಕಾರ್ಬನ್ ಡೈಯಾಕ್ಸೈಡ್ ಹೊಗೆ ಪ್ರಮಾಣ ನಿಯಂತ್ರಿಸಲು ಹಾಗೂ ನಗರದಾದ್ಯಂತ 21.96 ಲಕ್ಷ ಲೀಟರ್ ಇಂಧನ ಉಳಿತಾಯಕ್ಕೆ ಸಹಕಾರಿಯಾಗಿದೆ ಎಂದು ಓಲಾ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಅಕ್ಟೋಬರ್ 2015 ರಲ್ಲಿ ಬಿಡುಗಡೆಗೊಂಡ ಓಲಾ ಶೇರ್ ಪ್ರಸ್ತುತ ಚೆನ್ನೈ, ಪುಣೆ, ಮುಂಬಯಿ, ದೆಹಲಿ ಎನ್ಸಿಆರ್, ಹೈದರಾಬಾದ್, ಕೋಲ್ಕತಾಗಳಲ್ಲೂ ಕಾರ್ಯ ನಿರ್ವಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.